ಕೋವಿಡ್-19 ಲಸಿಕೆ ವಿಶ್ವ ರಾಷ್ಟ್ರಗಳಿಗೆ ಒದಗಿಸುತ್ತಿರುವ ಭಾರತದ ಕೊಡುಗೆಯನ್ನು ಶ್ಲಾಘಿಸಿರುವ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರಿಗೆ ಭಾರತ ಪ್ರಧಾನಿ ನರೇಂದ್ರ ಮೋದಿ, ಜಗತ್ತೇ ನಮ್ಮ ಕುಟುಂಬ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Glad to see your affection towards India. 🙂
We believe that the world is our family and want to play our role in strengthening the fight against COVID-19. https://t.co/zwpB3CNxLG
— Narendra Modi (@narendramodi) February 3, 2021
ದಕ್ಷಿಣ ಆಫ್ರಿಕಕ್ಕೆ ಕೋವಿಡ್-19 ಲಸಿಕೆ ಕಳುಹಿಸಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್, ಭಾರತದ ಔದಾರ್ಯ ಹಾಗೂ ಸಹಾಯ ಮನೋಭಾವವನ್ನು ಕೊಂಡಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಇಡೀ ವಿಶ್ವವೇ ನಮ್ಮ ಕುಟುಂಬ ಎಂಬುದನ್ನು ಭಾರತ ನಂಬಿದೆ ಎಂದು ಟ್ವೀಟ್ ಮಾಡಿದ್ದಾರೆ.
“ಭಾರತದ ಮೇಲಿನ ನಿಮ್ಮ ಪ್ರೀತಿ ನೋಡಿ ಸಂತೋಷವಾಯಿತು. ಇಡೀ ಜಗತ್ತು ನಮ್ಮ ಕುಟುಂಬ ಎಂದು ನಾವು ನಂಬುತ್ತೇವೆ ಮತ್ತು ಕೋವಿಡ್-19 ವಿರುದ್ಧದ ಹೋರಾಟವನ್ನು ಬಲಪಡಿಸುವಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಲು ಬಯಸುತ್ತೇವೆ, ” ಎಂದು ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಕೆವಿನ್ ಪೀಟರ್ಸನ್ಗೆ ಪ್ರತಿಕ್ರಿಯಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
