fbpx
ಸಮಾಚಾರ

ಹಿಂದೂ ದೇವತೆಗಳ ಅವಮಾನ: ಕಾಮೆಡಿಯನ್ ಮುನಾವರ್ ಫಾರುಖಿಗೆ ಜಾಮೀನು

ಹಿಂದೂ ದೇವತೆಗಳ ಮೇಲೆ ಅವಮಾನಕಾರಿ ಮಾತುಗಳನ್ನಾಡಿದ ಆರೋಪ ಎದುರಿಸುತ್ತಿರುವ ಸ್ಟಾಂಡ್​ಅಪ್​ ಕಾಮೆಡಿಯನ್ ಮುನಾವರ್ ಫಾರುಖಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಕಳೆದ ಒಂದು ತಿಂಗಳಿನಿಂದ ಜೈಲಿನಲ್ಲಿರುವ ಫಾರುಖಿ ಸಲ್ಲಿಸಿರುವ ರಿಟ್ ಅರ್ಜಿಯ ಮೇಲೆ ನ್ಯಾಯಾಲಯ ಮಧ್ಯಪ್ರದೇಶ ಸರ್ಕಾರಕ್ಕೆ ನೋಟೀಸು ಜಾರಿ ಮಾಡಿದೆ.

ಫಾರುಖಿ ಮೇಲೆ ಕೋಮುಸಾಹರ್ದತೆಗೆ ಧಕ್ಕೆ ತರುವ ಉದ್ದೇಶದಿಂದ ಹಿಂದೂ ದೇವತೆಗಳ ಮೇಲೆ ಅವಮಾನಕಾರಿ ಮಾತುಗಳನ್ನು ಆಡಿದ ಆರೋಪವಿದೆ. ಹೊಸ ವರ್ಷದ ದಿನ ಇಂದೋರಿನ ರೆಸ್ಟೋರೆಂಟಲ್ಲಿ ನಡೆದ ಫಾರುಖಿಯ ಕಾಮೆಡಿ ಶೋಗೆ ಸಂಬಂಧಪಟ್ಟಂತೆ ಜನವರಿ 2 ರಂದು ಫಾರುಖಿ ಮತ್ತು ಇತರ ನಾಲ್ವರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದರು.

ಫಾರುಖಿ ಅವರ ಜಾಮೀನು ಅರ್ಜಿಯನ್ನು ಮೊದಲು ಸೆಷನ್ಸ್​ ನ್ಯಾಯಾಲಯ ನಿರಾಕರಿಸಿದ್ದು, ನಂತರ ಜನವರಿ 28 ಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಕೂಡ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಫಾರುಖಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಫಾರುಖಿಗೆ ಮಧ್ಯಂತರ ಜಾಮೀನು ನೀಡಿದೆ. ಉತ್ತರ ಪ್ರದೇಶ ಪೊಲೀಸರಿಗೆ ಸಲ್ಲಿಸಲಾಗಿರುವ ಮತ್ತೊಂದು ದೂರಿನ ಮೇಲೆ ಫಾರುಖಿ ವಿರುದ್ಧ ಜಾರಿಯಾಗಿರುವ ಪ್ರೊಡಕ್ಷನ್ ವಾರಂಟ್​ಗೆ ಕೂಡ ಕೋರ್ಟ್ ತಡೆ ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top