ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸಿ ವಿವಾದವೆಬ್ಬಿಸಿದ್ದ ದೀಪ್ ಸಿಧು ನಾಪತ್ತೆಯಾಗಿರುವ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ ಇದೇ ವಿಚಾರದಲ್ಲಿ ಸರ್ಕಾರದ ಕಾಲೆಳೆದಿದ್ದಾರೆ.
Deep Sidhu can’t be found?
Must be hiding under Amit Shah’s umbrella, ella, ella, ella, eh, eh, eh-eh 😉 https://t.co/V49e6sELLi— Divya Spandana/Ramya (@divyaspandana) February 3, 2021
ದೀಪ್ ಸಿಧು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಛತ್ರಿಯಡಿ ಅವಿತಿರಬಹುದು ಎಂದು ರಮ್ಯಾ ವ್ಯಂಗ್ಯವಾಡಿದ್ದಾರೆ. “ದೀಪ್ ಸಿಧು ಕಾಣೆಯಾಗಿದ್ದಾರಾ? ಅವರೆಲ್ಲೋ ಅಮಿತ್ ಶಾ ಅವರ ಛತ್ರಿಯಡಿ ಅವಿತುಕೊಂಡಿರಬಹುದು ಲಾ… ಲಾ… ಲಾ…” ಎಂದು ರಮ್ಯಾ ಹಾಡು ಹಾಡಿದ ಶೈಲಿಯಲ್ಲಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆದ ಟ್ರ್ಯಾಕ್ಟರ್ ರ್ಯಾಲಿ ಗಣರಾಜ್ಯ ದಿನದಂದು ದೆಹಲಿಯಲ್ಲಿ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. ಇದಕ್ಕೆ ಕಾರಣ ಪಂಜಾಬಿ ನಟ ದೀಪ್ ಸಿಧು ಎಂಬ ಸುದ್ದಿ ಹಬ್ಬಿತ್ತು. ಇದೀಗ ದೀಪ್ ಸಿಧು ಕಾಣೆಯಾಗಿದ್ದು ಈತನ ಪತ್ತೆ ಮಾಡಿದವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ದೆಹಲಿ ಪೋಲೀಸರು ಘೋಷಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
