fbpx
ಸಮಾಚಾರ

ಹಾಲಿವುಡ್, ಬಾಲಿವುಡ್ ವಿರುದ್ಧ ಸದಾನಂದಗೌಡ ಆಕ್ರೋಶ

ರೈತರ ಪರ ಹೇಳಿಕೆಗಳನ್ನು ನೀಡುತ್ತಿರುವ ಹಾಲಿವುಡ್, ಬಾಲಿವುಡ್ ವಿರುದ್ಧ ಕೇಂದ್ರ ಸಚಿವ ಸದಾನಂದ ಗೌಡ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಅವರಿಗೆ ರೈತರ ಕಷ್ಟ ಏನೂ ಅನ್ನೋದು ಗೊತ್ತಾ? ಹೊಲದಲ್ಲಿ ಶೂಟಿಂಗ್ ಮಾಡಿರಬಹುದು, ರೈತರ ಪಾರ್ಟ್ ಮಾಡಿರಬಹುದು ಅಷ್ಟೆ. ಅವರಿಗೆ ಅಷ್ಟು ಬಿಟ್ಟು ರೈತರ ಬಗ್ಗೆ ಏನೂ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ದೇಶದ್ರೋಹಿಗಳ ಒಂದು ಗುಂಪು ವ್ಯವಸ್ಥಿತವಾಗಿ ಈ ಹೋರಾಟದ ಹಿಂದೆ ಇದೆ. ಕೊರೊನಾ ವೇಳೆ ಹಾಲಿವುಡ್, ಬಾಲಿವುಡ್ ನವರಿಗೆ ಶೂಟಿಂಗ್, ಪಬ್ಲಿಸಿಟಿ ಇರಲಿಲ್ಲ. ಅದಕ್ಕಾಗಿ ಈಗ ರೈತರ ಹೆಸರಲ್ಲಿ ಪಬ್ಲಿಸಿಟಿ ತೆಗೆದುಕೊಳ್ಳಲು ಈ ಟ್ವಿಟ್ ಗಳ ನಾಟಕ ಮಾಡುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದ್ದಾರೆ.

ಹಾಲಿವುಡ್, ಬಾಲಿವುಡ್ ನವರಿಗೆ ಯಾಕೆ ಈ ಉಸಾಬರಿ?, ಇದಕ್ಕೆ ಯಾಕೆ ಅವರು ಮೂಗು ತೂರಿಸುತ್ತಿದ್ದಾರೆ? ಹೋರಾಟ ನಡೆದು 70 ದಿನದ ನಂತರ ಈಗ ಯಾಕೆ ಹೀಗೆ ಒಬ್ಬೊಬ್ಬರೇ ಟ್ವೀಟ್ ಮಾಡುತ್ತಾ ನಾಟಕ ಮಾಡುತ್ತಿದ್ದಾರೆ. ಹಾಲಿವುಡ್, ಬಾಲಿವುಡ್ ನವರು ರೈತರ ಹೆಸರಲ್ಲಿ ಮಾಡ್ತಿರೋದು ನಾಟಕ ಎಂದು ಡಿವಿಎಸ್ ಗರಂ ಆದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top