fbpx
ಸಮಾಚಾರ

BPNL ನೇಮಕಾತಿ 2021: 3216 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

ಭಾರತೀಯ ಪಶುಪಾಲನಾ ನಿಗಮ ನಿಯಮಿತ (ಬಿಪಿಎನ್ಎಲ್) 3216 ಮಾರಾಟ ವ್ಯವಸ್ಥಾಪಕ, ಮಾರಾಟ ಅಭಿವೃದ್ಧಿ ಅಧಿಕಾರಿ ಮತ್ತು ಮಾರಾಟ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಫೆಬ್ರವರಿ 15,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ನೇಮಕಾತಿ ಬಗೆಗಿನ ಸಂಪೂರ್ಣ ಮಾಹಿತಿ ಪಡೆಯಲು ಮುಂದೆ ಓದಿ.

ಹುದ್ದೆ :
• ಸೇಲ್ಸ್ ಮ್ಯಾನೇಜರ್
• ಸೇಲ್ಸ್ ಡೆವಲಪ್ಮೆಂಟ್ ಆಫೀಸರ್
• ಸೇಲ್ಸ್ ಅಸಿಸ್ಟೆಂಟ್

ಶೈಕ್ಷಣಿಕ ಅರ್ಹತೆ :
ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಸೇಲ್ಸ್ ಡೆವಲಪ್ಮೆಂಟ್ ಆಫೀಸರ್ ಹುದ್ದೆಗೆ ದ್ವಿತೀಯ ಪಿಯುಸಿ ಪಾಸಾಗಿರಬೇಕು.
ಸೇಲ್ಸ್ ಅಸಿಸ್ಟೆಂಟ್ ಹುದ್ದೆಗೆ ಎಸ್.ಎಸ್.ಎಲ್.ಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ವೇತನ :
• ಸೇಲ್ಸ್ ಮ್ಯಾನೇಜರ್ – ಮಾಸಿಕ ರೂ. 21,000
• ಸೇಲ್ಸ್ ಡೆವಲಪ್ಮೆಂಟ್ ಆಫೀಸರ್ – ಮಾಸಿಕ ರೂ. 18,000
• ಸೇಲ್ಸ್ ಅಸಿಸ್ಟೆಂಟ್ – ಮಾಸಿಕ ರೂ. 15,000

ವಯೋಮಾನ :
ಮಾರಾಟ ವ್ಯವಸ್ಥಾಪಕ ಹುದ್ದೆಗಳಿಗೆ ಕನಿಷ್ಟ 25 ರಿಂದ ಗರಿಷ್ಟ 45 ವರ್ಷ ಹಾಗೂ ಮಾರಾಟ ಅಭಿವೃದ್ಧಿ ಮತ್ತು ಮಾರಾಟ ಸಹಾಯಕ ಹುದ್ದೆಗಳಿಗೆ ಕನಿಷ್ಟ 21 ರಿಂದ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top