fbpx
ಸಮಾಚಾರ

ರಾಜ್ಯಸಭೆಗೆ ಗುಲಾಂ ನಬಿ ಆಜಾದ್ ಅವಧಿ ಮುಕ್ತಾಯ: ಸೆಲ್ಯೂಟ್ ಹೊಡೆದು ಕಣ್ಣೀರಿಟ್ಟ ಪ್ರಧಾನಿ ಮೋದಿ

ಗುಲಾಂ ನಬಿ ಆಜಾದ್ ಸೇರಿದಂತೆ ಒಟ್ಟು ನಾಲ್ವರು ರಾಜ್ಯಸಭಾ ಸದಸ್ಯರು ನಿವೃತ್ತಿ ಹೊಂದುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಗುಲಾಂ ನಬಿ ಆಜಾದ್ ಉದ್ದೇಶಿಸಿ ಆತ್ಮೀಯ ವಿದಾಯ ಭಾಷಣ ಮಾಡಿದರು. ಈ ವೇಳೆ ಭಾವನಾತ್ಮಕ ಮಾತುಗಳನ್ನು ಆಡುತ್ತಾ ಪ್ರಧಾನಿ ನರೇಂದ್ರ ಮೋದಿ ಕಣ್ಣೀರಿಟ್ಟಿದ್ದಾರೆ.

“ನಾನು ಹಲವಾರು ವರ್ಷಗಳಿಂದ ಗುಲಾಮ್ ನಬಿ ಆಝಾದ್ ಅವರನ್ನು ತಿಳಿದಿದ್ದೇನೆ. ನಾವು ಒಟ್ಟಿಗೆ ಮುಖ್ಯಮಂತ್ರಿಗಳಾಗಿದ್ದೆವು. ನಾವು ಮುಖ್ಯಮಂತ್ರಿಯಾಗುವ ಮೊದಲೇ ಸಂವಹನ ನಡೆಸಿದ್ದೆವು. ಆಜಾದ್ ಸಾಬ್ ಸಕ್ರಿಯ ರಾಜಕಾರಣದಲ್ಲಿದ್ದಾಗ ಯಾರಿಗೂ ತಿಳಿಯದ ವಿಷಯವೇನೆಂದರೆ ಅವರಿಗೆ ತೋಟಗಾರಿಕೆಯಲ್ಲಿ ಉತ್ತಮ ಆಸಕ್ತಿಯಿತ್ತು.” ಎಂದು ಮೋದಿ ಹೇಳಿದರು.

ಆಜಾದ್ ಕೇವಲ ತಮ್ಮ ಪಕ್ಷದ ಕುರಿತು ಮಾತ್ರವಲ್ಲ, ಬದಲಿಗೆ ದೇಶದ ಕುರಿತೂ ಚಿಂತಿಸುವ ಸಜ್ಜನ ರಾಜಕಾರಣಿ. ಈ ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ದೇಶಕ್ಕಾಗಿ ಸಲ್ಲಿಸಿರುವ ಕೊಡುಗೆ ಮರೆಯುವುದಿಲ್ಲ ಎಂದು ಮೋದಿ ಭಾವುಕರಾಗಿ ನುಡಿದರು. ಆಜಾದ್ ಮತ್ತೆ ರಾಜ್ಯಸಭಾ ಸಂಸದರಾಗಿ ಈ ಸದನ ಪ್ರವೇಶಿಸಬೇಕು ಎಂಬುದು ತಮ್ಮ ವೈಯಕ್ತಿಕ ಬಯಕೆ. ಅವರಂತ ಉತ್ತಮ ಸಂಸದೀಯ ಪಟು ಸದನದಲ್ಲಿ ಇರುವುದು ಅವಶ್ಯಕ ಎಂದರು. ಗುಲಾಂ ನಬಿ ಆಜಾದ್ ನನ್ನ ಆತ್ಮೀಯ ಗೆಳೆಯ- ಆಜಾದ್ ಮತ್ತೆ ಈ ಸದನದ ಸದಸ್ಯರಾಗಲಿ- ವಿಪಕ್ಷ ನಾಯಕರಿಗೆ ಮೋದಿ ಕಣ್ಣೀರಿನ ವಿದಾಯ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top