fbpx
ಸಮಾಚಾರ

ರಿಹಾನಾ ಎಂದಾದ್ರೂ ಭತ್ತದ ಗದ್ದೆ ನೋಡಿದ್ದಾರಾ? ಪಾಪ್‌ ತಾರೆ ವಿರುದ್ಧ ಸದಾನಂದ ಗೌಡ ಕಿಡಿ

ಅಂತಾ​ರಾ​ಷ್ಟ್ರೀಯ ಪಾಪ್‌ ಗಾಯಕಿ ರಿಹಾನಾ ಅವ​ರು ಭಾರ​ತದ ರೈತ ಪ್ರತಿ​ಭ​ಟನೆಗೆ ಬೆಂಬಲ ನೀಡಿ​ರು​ವ ಬಗ್ಗೆ ಪ್ರಸ್ತಾಪಿಸಿ, ಅವರೆಂದಾದರು ಭತ್ತದ ಗದ್ದೆ ನೋಡಿದ್ದಾರಾ ಎಂದು ಕೇಂದ್ರ ಸಚಿವ ಸದಾನಂದ ಗೌಡ ಪ್ರಶ್ನೆ ಮಾಡಿದ್ದಾರೆ.

ಅಂತಾ​ರಾ​ಷ್ಟ್ರೀಯ ಪಾಪ್‌ ಗಾಯಕಿ ರಿಹಾನಾ ಅವ​ರು ಭಾರ​ತದ ರೈತ ಪ್ರತಿ​ಭ​ಟನೆಗೆ ಬೆಂಬಲ ನೀಡಿ​ರು​ವ ಕುರಿತುಸುದ್ದಿ​ಗಾ​ರರ ಪ್ರಶ್ನೆಗೆ ಉತ್ತರಿಸಿ, ರೈತರ ಕಷ್ಟದ ಬಗ್ಗೆ ರಿಹಾನಾ ಏನು ಮಾತನಾಡುತ್ತಾರೆ? ರಿಹಾನಾ ಎಂದಾದರೂ ಭತ್ತದ ಗದ್ದೆ ನೋಡಿದ್ದಾರಾ? ಬಹುಶಃ ಅವರು ಭತ್ತದ ಗದ್ದೆ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಹೋಗಿರಬಹುದು. ರಿಹಾನಾಗೆ ರೈತರ ಶ್ರಮದ ಬಗ್ಗೆ ಏನು ಗೊತ್ತಿದೆ? ರೈತರು ತಮ್ಮ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡುತ್ತಾರೆ ಅಂತ ಅವರಿಗೆ ಗೊತ್ತೆ? ವಿದೇಶಿ ಕೈಗೊಂಬೆಯಾಗಿ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ದೇಶದ್ರೋಹಿಗಳ ಒಂದು ಗುಂಪು ವ್ಯವಸ್ಥಿತವಾಗಿ ಈ ಹೋರಾಟದ ಹಿಂದೆ ಇದೆ. ಕೊರೊನಾ ವೇಳೆ ಹಾಲಿವುಡ್, ಬಾಲಿವುಡ್ ನವರಿಗೆ ಶೂಟಿಂಗ್, ಪಬ್ಲಿಸಿಟಿ ಇರಲಿಲ್ಲ. ಅದಕ್ಕಾಗಿ ಈಗ ರೈತರ ಹೆಸರಲ್ಲಿ ಪಬ್ಲಿಸಿಟಿ ತೆಗೆದುಕೊಳ್ಳಲು ಈ ಟ್ವಿಟ್ ಗಳ ನಾಟಕ ಮಾಡುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದ್ದಾರೆ.

ಹಾಲಿವುಡ್, ಬಾಲಿವುಡ್ ನವರಿಗೆ ಯಾಕೆ ಈ ಉಸಾಬರಿ?, ಇದಕ್ಕೆ ಯಾಕೆ ಅವರು ಮೂಗು ತೂರಿಸುತ್ತಿದ್ದಾರೆ? ಹೋರಾಟ ನಡೆದು 70 ದಿನದ ನಂತರ ಈಗ ಯಾಕೆ ಹೀಗೆ ಒಬ್ಬೊಬ್ಬರೇ ಟ್ವೀಟ್ ಮಾಡುತ್ತಾ ನಾಟಕ ಮಾಡುತ್ತಿದ್ದಾರೆ. ಹಾಲಿವುಡ್, ಬಾಲಿವುಡ್ ನವರು ರೈತರ ಹೆಸರಲ್ಲಿ ಮಾಡ್ತಿರೋದು ನಾಟಕ ಎಂದು ಡಿವಿಎಸ್ ಗರಂ ಆದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top