fbpx
ಸಮಾಚಾರ

ಬುರ್ಜ್ ಖಲೀಫಾ ಸಂಭ್ರಮ ಬಳಿಕ ಮತ್ತೊಂದು ಭರ್ಜರಿ ಸುದ್ದಿ ನೀಡಿದ ಸುದೀಪ್

ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್​ ರೋಣ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ದುಬೈನ ಬುರ್ಜ್​ ಖಲೀಫಾ ಕಟ್ಟಡದಲ್ಲಿ ನಿಂತು ಚಿತ್ರದ ಟೀಸರ್​ ಬಿಡುಗಡೆ ಮಾಡುವ ಮೂಲಕ ಹುಬ್ಬೇರುವಂತೆ ಮಾಡಿದ್ದ ಚಿತ್ರತಂಡ ಇದೀಗ ಮತ್ತೊಂದು ಘೋಷಣೆ ಮಾಡಿದ್ದು, ಚಿತ್ರವನ್ನು 3ಡಿ ವರ್ಷನ್​ನಲ್ಲಿ ಬಿಡುಗಡೆಯಾಗಲಿದೆ.

ಚಂದನವನದಲ್ಲಿ ಸುದೀಪ್‌ 25 ವಸಂತಗಳನ್ನು ಪೂರೈಸಿದ ಅಂಗವಾಗಿ ವಿಕ್ರಾಂತ್‌ ರೋಣ ಚಿತ್ರತಂಡವು ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸುದೀಪ್‌ ಈ ಕುರಿತು ಮಾಹಿತಿ ನೀಡಿದರು. ‘ಈ ಸಿನಿಮಾ ಕಥೆ ಅತ್ಯಂತ ಅದ್ಭುತವಾಗಿದೆ. ಇದನ್ನು ಪ್ಯಾನ್‌ ಇಂಡಿಯಾ ಮಾಡಬೇಕು ಎನ್ನುವ ಆಲೋಚನೆ ಮೊದಲಿನಿಂದಲೂ ಇತ್ತು. ನಿರ್ಮಾಪಕ ಮಂಜು ಅವರು ಈ ಚಿತ್ರವನ್ನು 3ಡಿಯಲ್ಲೂ ತರಲು ಸಿದ್ಧತೆ ನಡೆಸಿದ್ದಾರೆ. ಅದಕ್ಕೆ ಅಗತ್ಯವಾದ ಕೆಲಸ ನಡೆಯುತ್ತಿದೆ’ ಎಂದರು.

ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಸದ್ದು ಮಾಡುತ್ತಿರುವ ವಿಕ್ರಾಂತ್ ರೋಣ ಯಾವಾಗ ತೆರೆಕಾಣಲಿದೆ ಎಂಬ ಪ್ರಶ್ನೆಗೆ ಮಾತ್ರ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕೆಲ ಮೂಲಗಳ ಪ್ರಕಾರ ಚಿತ್ರ ಆಗಸ್ಟ್ ನಂತರವೇ ತೆರೆಗೆ ಬರುವ ಸಾಧ್ಯತೆ ಇದೆ. ಒಂದುವೇಳೆ ಬೇಗ ಬರುವುದೇ ಹೌದಾದಲ್ಲಿ ಜೂನ್​ ತಿಂಗಳಲ್ಲಿ ಬಿಡುಗಡೆಯಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಅದೇನೇ ಆದರೂ ಈ ವರ್ಷದಲ್ಲಿ ಸುದೀಪ್ ಅಭಿಮಾನಿಗಳಿಗೆ ದೊಡ್ಡ ಹಬ್ಬವೊಂದನ್ನು ಆಚರಿಸುವ ಘಳಿಗೆ ಬರುವುದು ನಿಶ್ಚಿತ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top