fbpx
ಸಮಾಚಾರ

ದರ್ಶನ್ ಹುಡುಗ್ರನ್ನು ಕೀಳುಮಟ್ಟದಲ್ಲಿ ಅವಮಾನಿಸಿದ ಜಗ್ಗೇಶ್: ಸ್ಪೋಟಕ ಆಡಿಯೋ ವೈರಲ್

ಚಿತ್ರರಂಗದಲ್ಲಿ ಆಗಾಗ ಸುಂಟರಗಾಳಿ, ಬಿರುಗಾಳಿ ಬೀಸುತ್ತಲೇ ಇರುತ್ತದೆ. ಸಣ್ಣಪುಟ್ಟ ಕಾರಣಗಳಿಗಾಗಿ ಎದ್ದ ಮನಸ್ತಾಪದಿಂದ ಎಷ್ಟೋ ಜನ ಒಳ್ಳೆಯ ಸ್ನೇಹಿತರು ದೂರಾಗಿದ್ದಿದೆ. ಈಗ ಆ ಸರದಿ ಜಗ್ಗೇಶ್ ಅವರಿಗೆ ಬಂದಂತಿದೆ. ಇಂದು ಬೆಳಗ್ಗೆಯಿಂದ ನವರಸನಾಯಕ ಜಗ್ಗೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಸಂಚಲನ ಮೂಡಿಸಿದೆ.

ವಿಡಿಯೋ ನೋಡಿ

 

 

ಕನ್ನಡ ಚಿತ್ರರಂಗದ ನಿರ್ಮಾಪಕರೊಬ್ಬರ ಜೊತೆ ಜಗ್ಗೇಶ್‌ ಅವರು ಫೋನ್‌ನಲ್ಲಿ ಮಾತನಾಡಿದ ಸಂಭಾಷಣೆಯ ಆಡಿಯೋ ಕ್ಲಿಪ್‌ ಲೀಕ್‌ ಆಗಿ, ರಾದ್ಧಂತ ಸೃಷ್ಟಿಸಿದೆ. ನಿರ್ಮಾಪಕರೊಬ್ಬರ ಬಳಿ ಸಿನಿಮಾ ಜಾಹೀರಾತಿನ ಬಗ್ಗೆ ದೂರವಾಣಿ ಮೂಲಕ ಮಾತನಾಡಿರುವ ಜಗ್ಗೇಶ್‌ ಅವರು ತಮ್ಮ ಜೊತೆಯಲ್ಲಿ ಇರುವವರನ್ನು ಹೊಗಳುವ ಭರದಲ್ಲಿ ನಟ ದರ್ಶನ್ ಅಭಿಮಾನಿಗಳನ್ನು ಕೀಳು ಮಟ್ಟದಲ್ಲಿ ನಿಂದಿಸಿದಿದ್ದಾರೆ.

 

 

ಸಿನಿಮಾ ಜಾಹಿರಾತು ಕೊಡುವ ವಿಚಾರದಲ್ಲಿ ನಿರ್ಮಾಪಕರೊಂದಿಗೆ ಮಾತನಾಡುವ ವೇಳೆ, “ನನ್ನ ಬಳಿ ಇರೋರೆಲ್ಲಾ ಒಳ್ಳೆಯ ಜನರು. ಎಲ್ಲರೂ ಹಾರ್ಡ್ ವರ್ಕರ್ಸ್.. ಆದರೆ ದರ್ಶನ್ ಥರ ಅವರ್ ಥರ ಅ***ನ್ ತಲೆಮಾಂಸ ಕಳಿಸಿ ಅಣ್ಣಾ, ನೂರು ಕುರಿ ಕಳಿಸಿ ಅಣ್ಣಾ ಅಂತ ಎನ್ನುವವರು ನಮ್ಮ ಬಳಿ ಇಲ್ಲ’ ಎಂದು ಆಡಿಯೋದಲ್ಲಿ ಜಗ್ಗೇಶ್ ಹೇಳಿದ್ದಾರೆ. ಜಗ್ಗೇಶ್ ಹೇಳಿಕೆ ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top