fbpx
ಸಮಾಚಾರ

ಮಿಲನಾ ನಾಗರಾಜ್‌ & ಕೃಷ್ಣ ಮೆಹಂದಿ ಸಂಭ್ರಮ: ಫೋಟೋಸ್ ವೈರಲ್, ರಂಗೇರಿದ ಸ್ಟಾರ್ ಜೋಡಿಯ ಮದುವೆ ಸಡಗರ

‘ಲವ್‌ ಮಾಕ್‌ಟೇಲ್‌’ ಸಿನಿಮಾದಿಂದ ದೊಡ್ಡ ಯಶಸ್ಸು ಕಂಡ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ಈಗ ವೈವಾಹಿಕ ಜೀವನ ಆರಂಭಿಸುತ್ತಿದ್ದಾರೆ. ಇದೇ ಫೆಬ್ರವರಿ 14ರಂದು ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗ್​ರಾಜ್​ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರಗಳೆಲ್ಲಾ ಶುರುವಾಗಿದ್ದು, ನಿನ್ನೆ ರಾತ್ರಿ ಮಿಲನಾ ನಾಗ್​ರಾಜ್​ ತವರೂರು ಹಾಸನದಲ್ಲಿ ಇಬ್ಬರ ಮದರಂಗಿ ಶಾಸ್ತ್ರ ನೆರವೇರಿದೆ.

 

 

ಹಾಸನದ ನಂದಗೋಕುಲ ಕನ್ವೆನ್ಷನ್ ಸೆಂಟರ್‌ನಲ್ಲಿ ಸ್ನೇಹಿತರು, ಕುಟುಂಬಸ್ಥರ ಜೊತೆ ಮೆಹಂದಿ ಕಾರ್ಯಕ್ರಮ ನಡೆಸಿದ್ದಾರೆ. ಕೃಷ್ಣ-ಮಿಲನಾರ ಹೆಸರಿನ ಶಾರ್ಟ್​ ಫಾರ್ಮ್​ ಬಳಸಿ, ಇವರಿಬ್ಬರ ಮದುವೆಗೆ ‘KrissMi ವೆಡ್ಡಿಂಗ್​ ಅಂತ ಹೆಸರಿಟ್ಟಿದ್ದಾರೆ.

 

 

ಮೆಹಂದಿ ಸಡಗರದ ಫೋಟೋಗಳನ್ನು ಮಿಲನಾ ಮತ್ತು ಕೃಷ್ಣ ಅವರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಕಂಡ ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಭಾವಿ ಪತ್ನಿಯ ಕೈಗೆ ಸ್ವತಃ ಡಾರ್ಲಿಂಗ್‌ ಕೃಷ್ಣ ಅವರೇ ‘ಮದರಂಗಿ’ ಹಾಕುವ ಮೂಲಕ ಪ್ರೀತಿಯ ರಂಗು ಹೆಚ್ಚಿಸಿದ್ದಾರೆ. ತಮ್ಮ ಮದುವೆಯ ಪ್ರತಿ ಹಂತದ ಫೋಟೋ ಮತ್ತು ವಿಡಿಯೋ ತುಣುಕುಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿದೆ ಈ ಜೋಡಿ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top