fbpx
ಸಮಾಚಾರ

ತೇಜಸ್ವಿ ಸೂರ್ಯ ತಲೆಕೆಡಿಸಿಕೊಳ್ಳದ ಬೆಂ.ದಕ್ಷಿಣದ ಬ್ಯಾಂಕ್ ಬಗ್ಗೆ ಸಂಸತ್ ನಲ್ಲಿ ಬಡ ಕನ್ನಡಿಗರ ಪರವಾಗಿ ಧ್ವನಿಯೆತ್ತಿದ ಜಿಸಿ ಚಂದ್ರಶೇಖರ್

ಬೆಂಗಳೂರಿನ ಬಸವನಗುಡಿಯಲ್ಲಿರುವ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್ ಲಿಮಿಟೆಡ್‌ನ ಠೇವಣಿದಾರರ ಹಣ ದುರ್ಬಳಕೆ ಹಾಗೂ ಅವ್ಯವಹಾರ ಪ್ರಕರಣದ ಬಗ್ಗೆ ಸಂಸತ್ ನಲ್ಲಿ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರು ಧ್ವನಿಯೆತ್ತಿದಾರೆ.

 

 

 

ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನ ವಹಿವಾಟಿನಲ್ಲಿ ಅವ್ಯವಹಾರದ ಆರೋಪ ಬಂದಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ನಿರ್ಬಂಧ ಹೇರಿತ್ತು. ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ ಹೊಂದಿರುವ ಗ್ರಾಹಕರು ಮೂವತ್ತೈದು ಸಾವಿರ ರುಪಾಯಿ ತನಕ ನಗದು ಮಾತ್ರ ವಿಥ್ ಡ್ರಾ ಮಾಡಬಹುದು ಎಂದು ನಿರ್ಬಂಧ ಹೇರಿತ್ತು. ಇದರಿಂದ ಸಾವಿರಾರು ಠೇವಣಿದಾರರು ಆತಂಕಗೊಂಡಿದ್ದರು.

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಬಹುಕೋಟಿ ಹಗರಣದ ಬಗ್ಗೆ ಕಳೆದ ಒಂದು ವರ್ಷದಿಂದ ಸುದ್ದಿಯಾಗುತ್ತಲೇ ಇದ್ದು ಬ್ಯಾಂಕ್ ನ ಠೇವಣಿದಾರರು ಪ್ರತಿಭಟಿಸುತ್ತಲೇ ಇದ್ದರು., ಹೀಗಿದ್ದರೂ ಈ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಲೆ ಕೆಡಿಸಿಕೊಂಡಿರಲಿಲ್ಲ.. ತಮ್ಮ ಸಮಸ್ಯೆಯಲ್ಲಿ ಆಲಿಸಿ ತಮಗೆ ನ್ಯಾಯ ಕೊಡಿಸಲು ಆಗದ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ಠೇವಣಿದಾರರು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ತೇಜಸ್ವಿ ಸೂರ್ಯ ಅವರ ಕೈಯಿಂದ ಆಗದ ಕೆಲಸವನ್ನು ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಮಾಡಿ ತೋರಿಸಿದ್ದಾರೆ. ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಬಹುಕೋಟಿ ಹಗರಣದ ಬಗ್ಗೆ ಠೇವಣಿದಾರರ ಪರವಾಗಿ ಸಂಸತ್ ನಲ್ಲಿ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ವಿತ್ತ ಸಚಿವರ ಬಳಿ ಮನವಿ ಮಾಡಿರುವ ಚಂದ್ರಶೇಖರ್ ಅವರು ಠೇವಣಿದಾರರ ಹಣ ವಾಪಸ್ಸು ಕೊಡಿಸುವಂತೆ ಮನವಿ ಮಾಡಿದ್ದಾರೆ.

” ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ಗೆ ಗ್ರಾಹಕರಿಂದ ಠೇವಣಿ ಸಂಗ್ರಹ, ಹಣ ವಾಪಸ್‌ ಪಡೆಯುವುದು ಸೇರಿದಂತೆ ವ್ಯವಹಾರ ಸಂಬಂಧ ಷರತ್ತುಗಳನ್ನು ವಿಧಿಸಿದರಿಂದ 41000 ಠೇವಣಿದಾರರಿಗೆ ಸಮಸ್ಯೆಯಾಗಿದೆ. ಇದರಿಂದ ಪರೋಕ್ಷವಾಗಿ ಸುಮಾರು 2.5ಲಕ್ಷ ಜನರಿಗೆ ತೊಂದರೆಯಾಗಿದೆ. ಈ ಬ್ಯಾಂಕ್ ಬಹುತೇಕ ಠೇವಣಿದಾರರು ನಿವೃತ್ತ ನೌಕರರೇ ಆಗಿದ್ದು 16ಕ್ಕೂ ಹೆಚ್ಚು ಮಂದಿ ನಿಧನರಾಗಿದ್ದಾರೆ. 40ಕ್ಕೂ ಹೆಚ್ಚು ನಿವೃತ್ತಿ ನೌಕರರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ”

“ತಮ್ಮ ಹಣವನ್ನು ಕಳೆದುಕೊಳ್ಳುವ ಭಯ ಠೇವಣಿದಾರರಲ್ಲಿ ಉಂಟಾದ ಕಾರಣ ಅವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಜನರ ಕಷ್ಟಪಟ್ಟು ದುಡಿದ ಹಣ ಸುರೀಕ್ಷತವಾಗಿದೆಯೇ? ಇಲ್ಲವೇ ಎಂಬುದನ್ನು ಸರ್ಕಾರ ಠೇವಣಿದಾರರಿಗೆ ಭರವಸೆ ನೀಡಬೇಕು” ಎಂದು ಚಂದ್ರಶೇಖರ್ ಅವರು ಸಂಸತ್ ನಲ್ಲಿ ಆಗ್ರಹಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top