fbpx
ಸಮಾಚಾರ

ಬಿಗ್‍ಬಾಸ್ 8ಕ್ಕೆ ಕ್ಷಣಗಣನೆ- ಬಿಗ್‌ ಬಾಸ್‌ಗಾಗಿ ಸುದೀಪ್‌ ಜೋಯಿಸರ ಅವತಾರ!

ಕನ್ನಡ ಬಿಗ್​ ಬಾಸ್​ 8 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ವೈರಸ್​ ಇರುವ ಕಾರಣ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಮನೆ ಒಳಗೆ ಹೋಗುವ ಅಭ್ಯರ್ಥಿಗಳಿಗೆ ಕೊರೊನಾ ವೈರಸ್​ ಪರೀಕ್ಷೆ ಮಾಡಿಸೋದು ಕಡ್ಡಾಯವಾಗಿದೆ. ಈಗ ಬಿಗ್​ ಬಾಸ್​ ಆರಂಭಕ್ಕೂ ಮೊದಲೇ ಸಾಕಷ್ಟು ಬದಲಾವಣೆಯೊಂದಿಗೆ ಕಿಚ್ಚ ಸುದೀಪ್​ ಅಭಿಮಾನಿಗಳ ಎದುರು ಕಾಣಿಸಿಕೊಂಡಿದ್ದಾರೆ.

 

 

ಬಿಗ್‍ಬಾಸ್ ಕಾರ್ಯಕ್ರಮ ಪ್ರಸಾರವಾಗುವ ಖಾಸಗಿ ವಾಹಿನಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕಿಚ್ಚ ಅವರ ಹೊಸ ಫೋಟೋವನ್ನು ಹಂಚಿಕೊಂಡು ಇನ್ನೊಂದು ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸುದೀಪ್ ಜೋಯಿಸರ ಅವರತಾರದಲ್ಲಿರುವ ಫೋಟೋವನ್ನು ಹಂಚಿಕೊಂಡು ಲಾಕ್ ಡೌನ್ 8.0ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಗೆಸ್ ಮಾಡಿ, ಕಮೆಂಟ್‍ನಲ್ಲಿ ಹೇಳಿ ಎಂದು ಬರೆದುಕೊಂಡು ಬಿಗ್ ಬಾಸ್ ತಂಡದಿಂದ ಹೊಸ ಮಾಹಿತಿಯನ್ನು ಹೊರಹಾಕಿದ್ದಾರೆ..

ಇನ್ನು ಈ ಬಾರಿ ಯಾರೆಲ್ಲ ಬಿಗ್‌ ಬಾಸ್ ಪ್ರವೇಶಿಸುತ್ತಾರೆ ಎಂಬ ಬಗ್ಗೆ ದೊಡ್ಡ ಕೌತುಕ ನಿರ್ಮಾಣ ಆಗಿದೆ. ಅನೇಕರ ಹೆಸರುಗಳು ಈಗಾಗಲೇ ಹರಿದಾಡುತ್ತಿವೆ. ‘ಅಗ್ನಿಸಾಕ್ಷಿ’ ಧಾರಾವಾಹಿಯ ಅಂಜಲಿ ಪಾತ್ರಧಾರಿ ಸುಕೃತಾ ನಾಗ್‌, ‘ಬಹ್ಮಗಂಟು’ ಧಾರಾವಾಹಿ ನಟಿ ಗೀತಾ ಭಾರತಿ ಭಟ್‌, ‘ಸಿಲ್ಲಿ ಲಲ್ಲಿ’ ರವಿಶಂಕರ್‌, ‘ಸರಿಗಮಪ’ ಹನುಮಂತ, ನಟ ಸುನಿಲ್‌ ರಾವ್‌, ‘ದಿಲ್ವಾಲ’ ಖ್ಯಾತಿಯ ನಟ ಸುಮಂತ್‌ ಶೈಲೇಂದ್ರ ಹೀಗೆ ಅನೇಕರ ಹೆಸರುಗಳು ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top