fbpx
ಸಮಾಚಾರ

ವಿಶೇಷ ವಿಡಿಯೋ ಮೂಲಕ ಮುದ್ದು ಮಗನನ್ನು ಫ್ಯಾನ್ಸ್ ಗೆ ಪರಿಚಯಿಸಿದ ಮೇಘನಾ: ಹೇಗಿದ್ದಾನೆ ನೋಡಿ ಜೂ.ಚಿರು

ದಿವಂಗತ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ಪುತ್ರ ಹುಟ್ಟಿ ನಾಲ್ಕು ತಿಂಗಳಾಗುತ್ತ ಬಂತು. ಆದರೆ ಮಗು ಹುಟ್ಟಿದ ದಿನ ಬಿಟ್ಟರೆ ಆಮೇಲೆ ಅಭಿಮಾನಿಗಳು ಯಾರೂ ಆ ಮಗುವಿನ ಮುಖ ನೋಡಿರಲಿಲ್ಲ. ‘ಪ್ರೇಮಿಗಳ ದಿನ’ದ ಪ್ರಯುಕ್ತ ಮೇಘನಾ ಎಲ್ಲರಿಗೂ ಮಗನ ಮುಖದ ದರ್ಶನ ಮಾಡಿಸಿದ್ದಾರೆ.

 

 

View this post on Instagram

 

A post shared by Meghana Raj Sarja (@megsraj)

 

ಈ ಹಿಂದೆ ಪೋಸ್ಟ್ ಹಾಕಿದ್ದ ಮೇಘನಾ ಫೆಬ್ರವರಿ 12ರಂದು ರೋಮಾಂಚನಕಾರಿ ಸುದ್ದಿಯೊಂದು ಹೊರ ಬೀಳಲಿದೆ. ಆ ದಿನಕ್ಕಾಗಿ ನಾನು ಕೂಡ ಕಾಯುತ್ತಿದ್ದೇನೆ ಎಂದಿದ್ದರು. ಬಳಿಕ ಫೆ.13 ರಂದು ಮತ್ತೊಂದು ಪೋಸ್ಟ್ ಹಾಕಿ ರಾತ್ರಿ 12 ಗಂಟೆಗೆ ಜ್ಯೂನಿಯರ್‌ ಚಿರುವನ್ನು ನಿಮಗೆ ಪರಿಚಯ ಮಾಡುತ್ತೇನೆ ಎಂದು ಮತ್ತೊಂದು ಪೋಸ್ಟ್‌ ಹಾಕಿದ್ದರು. ಕಳೆದ ರಾತ್ರಿ 12 ಗಂಟೆಗೆ ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಾಕಿರುವ ಮೇಘನಾ ಮಗುವಿನ ಮುದ್ದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

 

 

`ನಮ್ಮ ಸಿಂಬಾ.! ಐ ಲವ್ ಯು ಆಲ್..!
ಇನ್ ಸ್ಟಾಗ್ರಾಂನಲ್ಲಿ ಜೂ. ಚಿರುವಿನ ಸುಂದರ ವಿಡಿಯೋ ಪೋಸ್ಟ್ ಮಾಡಿರುವ ಮೇಘನಾ , ಪುಟ್ಟ ಯುವರಾಜನನ್ನು ಪರಿಚಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ನಮ್ಮ ಸಿಂಬಾ ಅಂತಲೂ ಹೇಳಿದ್ದಾರೆ. ಅಪ್ಪ ಅಮ್ಮನ ಪ್ರೀತಿ, ಬೆಂಬಲ ನಿನ್ನೊಂದಿಗಿದೆ. ನೀನೇ ಪರಿವಾರ ಮತ್ತು ಪರಿವಾರ ನಿನ್ನನ್ನು ಬೇಷರತ್ ಪ್ರೀತಿಸುತ್ತದೆ. ಇವನು ನಮ್ಮ ಸಿಂಬಾ, ಐ ಲವ್ ಯು ಆಲ್ ಎಂದು ಮೇಘನಾ ಬರೆದುಕೊಂಡಿದ್ದಾರೆ.

 

 

View this post on Instagram

 

A post shared by Meghana Raj Sarja (@megsraj)

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top