fbpx
ಸಮಾಚಾರ

ಅಭಿಮಾನಿಗಳ ಜೊತೆ ಮಾತನಾಡುತ್ತಾ ಕಣ್ಣೀರು ಹಾಕಿದ ನಟಿ ರಾಗಿಣಿ

ಡ್ರಗ್ಸ್​ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದರು. ಜೈಲಿನಿಂದ ಹೊರಬಂದ ನಂತರ ಇದೇ ಮೊದಲ ಬಾರಿಗೆ ಇನ್​ಸ್ಟಾಗ್ರಾಂನಲ್ಲಿ ಲೈವ್​ನಲ್ಲಿ ಬಂದು ರಾಗಿಣಿ ಸಾಕಷ್ಟು ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅಭಿಮಾನಿಗಳ ಮೆಸೇಜ್​ಗಳನ್ನು ನೋಡಿ ಅವರು ಕಣ್ಣೀರನ್ನು ಕೂಡ ಇಟ್ಟಿದ್ದಾರೆ.

ಜೈಲುವಾಸದ ದಿನಗಳ ಬಗ್ಗೆ ರಾಗಿಣಿ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ. ಆ ದಿನಗಳು ತಮಗೆ ಬಹಳ ಕಷ್ಟ ನೀಡಿರೋದಾಗಿಯೂ, ಆ ಸಮಯದಲ್ಲಿ ಮೌನವೇ ಅವರ ಉ್ತತರವಾಗಿದ್ದ ಬಗ್ಗೆ ಬಿಚ್ಚಿಟ್ಟಿದ್ದಾರೆ. ಹಾಗೇ ತಮ್ಮ ಕಷ್ಟ ಸಮಯದಲ್ಲೂ ತಮ್ಮ ಜೊತೆಗೆ ನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

 

 

ಆ ದಿನಗಳು ತುಂಬಾ ಕಷ್ಟದ್ದಾಗಿತ್ತು, ಕುಟುಂಬದ ಬೆಂಬಲದಿಂದಲೇ ನಾನು ಸ್ಟ್ರಾಂಗ್ ಆಗಿದ್ದೇನೆ. ನಾನು ತುಂಬಾ ಮೌನ ವಹಿಸಿದ್ದೇನೆ. ಆದರೆ ದುರ್ಬಲಗೊಂಡಿಲ್ಲ. ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇದ್ದರೆ, ನಿಮ್ಮಲ್ಲಿ ಛಲವಿದ್ದರೆ ಯಾರಿಗೂ ಯಾವುದಕ್ಕೂ ಉತ್ತರಿಸಬೇಕಿಲ್ಲ. ಈ ಶಕ್ತಿಯಿಂದಲೇ ನಾನೀಗ ನಿಮ್ಮ ಮುಂದೆ ಬಂದು ಮಾತನಾಡುತ್ತಿದ್ದೇನೆ. 12 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದೇನೆ ಎಲ್ಲ ರೀತಿಯ ಏಳು ಬೀಳುಗಳನ್ನು ಕಂಡಿದ್ದೇನೆ. ಕಷ್ಟದ ಸಂದರ್ಭಗಳನ್ನು ನಿಭಾಯಿಸುವ ಬಗ್ಗೆ ನಮ್ಮ ತಂದೆ, ತಾಯಿ ನಮಗೆ ಚೆನ್ನಾಗಿ ಹೇಳಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಒಂದು ಸೂಪರ್ ಹಿಟ್ ಫಿಲ್ಮ್ ಬರುತ್ತೆ, ಬಳಿಕ ಥಟ್ ಅಂತ ಮತ್ತೊಂದು ಫಿಲ್ಮ್ ಫ್ಲಾಪ್ ಆಗುತ್ತೆ. ಶೂಟಿಂಗ್ ಮಾಡುವಾಗ ಸಹ ಕೆಲವು ಬಾರಿ ಸೀನ್‍ಗಳು ತುಂಬಾ ಚೆನ್ನಾಗಿ ಬರುತ್ತವೆ. ಇನ್ನೂ ಕೆಲವು ಬಾರಿ ಕೆಟ್ಟದಾಗಿ ಮಾತನಾಡುತ್ತೇವೆ. ಹೀಗಾಗಿ ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು. ಪ್ರತಿ ದಿನ ಇನ್‍ಸ್ಪಿರೇಶನ್ ಪಡೆಯಬೇಕು. ನಾನು ಇಷ್ಟು ಗಟ್ಟಿಯಾಗಿ ಇರಬೇಕಾದರೆ ನನ್ನ ತಂದೆ, ತಾಯಿಯೇ ಕಾರಣ ಎಂದಿದ್ದಾರೆ.

ಇಷ್ಟೆಲ್ಲ ಪಾಸಿಟಿವ್‌ ಆಗಿ ಮಾತನಾಡುವ ಅವರು ಕೂಡ ಒಮ್ಮೊಮ್ಮೆ ಕುಗ್ಗುತ್ತಾರೆ. ‘ಇದು ಸುಲಭ ಆಗಿರಲಿಲ್ಲ. ತುಂಬ ಕಷ್ಟಪಟ್ಟಿದ್ದೇನೆ. ಇನ್ನೂ ಚೇತರಿಸಿಕೊಳ್ಳಬೇಕಿದೆ. ಸಮಯ ಎಲ್ಲವನ್ನೂ ಸರಿಪಡಿಸುತ್ತದೆ. ನಾನು ಎಷ್ಟೇ ಪಾಸಿಟಿವ್‌ ಆಗಿದ್ದರೂ ಒಮ್ಮೊಮ್ಮೆ ರಾತ್ರಿ ನಿದ್ದೆ ಬರುವುದಿಲ್ಲ. ಆದರೆ ನನ್ನ ಕುಟುಂಬ ನನಗೆ ಶಕ್ತಿ ನೀಡಿದೆ’ ಎಂದು ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಭಾವುಕರಾಗಿ ರಾಗಿಣಿ ಕಣ್ಣೀರು ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top