fbpx
ಸಮಾಚಾರ

”ನಿತ್ಯ ನಮಾಜ್ ಮಾಡ್ತೇನೆ” ಇಸ್ಲಾಂ ಮತಾಂತರದ ಬಗ್ಗೆ ನಟಿ ಸಂಜನಾ ಹೇಳಿದ್ದೇನು ಗೊತ್ತಾ?

ಮಾದಕ ವಸ್ತು ಜಾಲದ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ ಅವರು ಜಾಮೀನು ಪಡೆದು ಹೊರಬಂದ ಬಳಿಕ ಒಂದಷ್ಟು ವಿಷಯಗಳನ್ನು ಸ್ಪಷ್ಟಪಡಿಸುತ್ತಿದ್ದಾರೆ. ತಾವು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದು ಯಾಕೆ ಎಂಬ ಬಗ್ಗೆ ಅವರು ಇತ್ತೀಚೆಗಿನ ಫೇಸ್‌ಬುಕ್‌ ಲೈವ್‌ನಲ್ಲಿ ಹೇಳಿಕೊಂಡಿದ್ದಾರೆ.

‘ನಾನು ಎಲ್ಲ ದೇವರನ್ನೂ ನಂಬುತ್ತೇನೆ. ಅಲ್ಲಾ ಮೇಲೆಯೂ ನನಗೆ ನಂಬಿಕೆ ಇದೆ. ಮತಾಂತರ ಆಗಿದ್ದೇನೆ ಎಂಬುದನ್ನು ಯಾಕೆ ಇಷ್ಟು ದೊಡ್ಡ ವಿಷಯವನ್ನಾಗಿ ಮಾಡಿದರೋ ಗೊತ್ತಿಲ್ಲ. ಅದು ನನ್ನ ಇಷ್ಟ. ನನ್ನ ವೈಯಕ್ತಿಕ ಆಯ್ಕೆ. ನನಗೆ ಖಾಸಗಿ ಬದುಕು ಇಲ್ಲವೇ?’ ಎಂದು ಹೇಳಿಕೊಂಡಿದ್ದಾರೆ ಸಂಜನಾ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು “ಒಂದೆರಡು ಮಾತು ಹೇಳಿದ್ದರೆ ಸ್ಪಷ್ಟನೆ ಕೊಡಬಹುದು.. ಸಾವಿರಾರು ಮಾತು ಹೇಳಿದರೆ ಯಾರಿಗೆ ಸ್ಪಷ್ಟನೆ ಕೊಡೋಣ. ಇಷ್ಟೆಲ್ಲಾ ನೋವನ್ನು ಅನುಭವಿಸುವ ಬದಲು ನನಗೆ ಸಾವು ಕೊಡು ಅಂತ ನಮಾಜ್ ಮಾಡುವಾಗ ಕೇಳಿಕೊಂಡಿದ್ದೆ” ಎಂದು ಸಂಜನಾ ಹೇಳಿದ್ದಾರೆ.

ಅರ್ಚನಾ ಮನೋಹರ್ ಗರ್ಲಾನಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಡುವಾಗ ಸಂಜನಾ ಗರ್ಲಾನಿ ಹೆಸರು ಬದಲಾಯಿಸಿಕೊಂಡಿದ್ದಾರೆ. ಸಂಜನಾ, ವೈದ್ಯ ಅಜೀಝ್ ಪಾಶಾ ಮದುವೆಯಾಗಿರುವ ವಿಚಾರ ಇತ್ತೀಚೆಗೆ ಬಹಿರಂಗೊಂಡಿತ್ತು. ಸಂಜನಾಳ ಈ ಪ್ರೀತಿ ಹಾಗೂ ಮದುವೆ ಇಷ್ಟಕ್ಕೆ ನಿಲ್ಲಲಿಲ್ಲ. 2018ರಲ್ಲಿ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರುವ ದಾರುಲ್ ಉಲೂಮ್ ಶಾಹ್ ವಲ್ಲಿಉಲ್ಲಾ ಮಸೀದಿಯಲ್ಲಿ ಸಂಜನಾ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top