fbpx
ಸಮಾಚಾರ

ಇನ್ನು ಮುಂದೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಅಲ್ಲ, ಹೆಸರು ಬದಲಾಯಿಸಿಕೊಂಡ KXIP ತಂಡ: ಹೊಸ ಹೆಸರೇನು ಗೊತ್ತಾ?

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್​ನಲ್ಲಿ ಇದುವರೆಗೆ ಯಾವುದೇ ಪ್ರಶಸ್ತಿಯನ್ನು ಗೆದ್ದಿಲ್ಲ. ಅಲ್ಲದೆ ಒಮ್ಮೆ ಮಾತ್ರ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್ 2021 ರಲ್ಲಿ ಕಣಕ್ಕಿಳಿಯುವ ಮುನ್ನ ತನ್ನ ತಂಡದ ಹೆಸರನ್ನು ಬದಲಾಯಿಸಲು ನಿರ್ಧರಿಸಿದೆ. IPL 2021 ರಲ್ಲಿ ಪ್ರೀತಿ ಜಿಂಟಾ ಒಡೆತನದ ಈ ತಂಡವು ‘ಪಂಜಾಬ್ ಕಿಂಗ್ಸ್’ ಹೆಸರಿನಲ್ಲಿ ಆಡಲಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮುಂಬರುವ ಆವೃತ್ತಿಯಿಂದ ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡವನ್ನು ‘ಪಂಜಾಬ್‌ ಕಿಂಗ್ಸ್’ ಎಂದು ಕರೆಯಲಾಗುತ್ತದೆ. ಆ ಮೂಲಕ ದೀರ್ಘ ಕಾಲ ಸಮಾಲೋಚನೆಯ ಬಳಿಕ ಫ್ರಾಂಚೈಸಿ ಹೆಸರು ಬದಲಾವಣೆ ಮಾಡಿಕೊಳ್ಳಬೇಕೆಂದಿದ್ದ ಪಂಜಾಬ್‌ ಫ್ರಾಂಚೈಸಿಯ ಯೋಜನೆ ಇದೀಗ ಸಕಾರವಾಗಿದೆ.

“ತಂಡವು ದೀರ್ಘಕಾಲದಿಂದ ಹೆಸರು ಬದಲಾಯಿಸಲು ಯೋಜಿಸುತ್ತಿತ್ತು. ಹಾಗಾಗಿ, ಈ ವರ್ಷ ಐಪಿಎಲ್ ಸರಣಿಗೂ ಮೊದಲೇ ಇದನ್ನು ಮಾಡಬೇಕೆಂದು ಯೋಚಿಸಿದೆ. ಆದ್ದರಿಂದ ಇದು ಹಠಾತ್ ನಿರ್ಧಾರವಲ್ಲ” ಎಂದು ಬಿಸಿಸಿಐ ಮೂಲವು ಸೋಮವಾರ ಪಿಟಿಐಗೆ ತಿಳಿಸಿದೆ. ಬದಲಾದ ಹೆಸರಿನ ತಂಡವನ್ನು ಮುಂಬೈನಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಘೋಷಿಸುವ ನಿರೀಕ್ಷೆ ಇದೆ. ಐಪಿಎಲ್ 2021 ಹರಾಜಿನ ಮೊದಲು ಈ ಕಾರ್ಯಕ್ರಮ ನಡೆಯಬಹುದು ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top