fbpx
ಸಮಾಚಾರ

ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾದ ಇಂಟರ್ವಲ್​ನಲ್ಲಿ ಚಿರು ದರ್ಶನ

ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾ ಇದೇ ಫೆಬ್ರವರಿ 19ರಂದು ಬಿಡುಗಡೆಯಾಗ್ತಿದೆ. ಲಾಕ್ ಡೌನ್ ನಂತರ ಬಿಡುಗಡೆಯಾಗುತ್ತಿರುವ ಮೊದಲ ಬಿಗ್ ಬಜೆಟ್ ಸಿನಿಮಾ ಹೆಗ್ಗಳಿಕೆ ಪಡೆದಿರುವ ಪೊಗರು ಚಿತ್ರದ ಮೇಲೆ ಚಿತ್ರರಸಿಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಪೊಗರು’ ಸಿನಿಮಾದ ಇಂಟರ್ವಲ್​ನಲ್ಲಿ ಧ್ರುವ ಸಹೋದರ ದಿವಂಗತ ಚಿರು ದರ್ಶನವಾಗಲಿದೆ ಎಂಬ ವಿಚಾರ ತಿಳಿದುಬಂದಿದೆ.

 

 

ಹೌದು, ಪೊಗರು ಚಿತ್ರದ ಇಂಟರ್ ವೆಲ್ ನಲ್ಲಿ ಚಿರಂಜೀವಿ ಸರ್ಜಾ ನಟನೆಯ ಕೊನೆ ಚಿತ್ರಗಳಲ್ಲಿ ಒಂದಾದ ರಾಜಮಾರ್ತಾಂಡ ಚಿತ್ರದ ಟ್ರೈಲರ್ ಪ್ರಸಾರ ಮಾಡಲಾಗುತ್ತದೆ. ಈ ವಿಚಾರವನ್ನು ಸ್ವತಃ ದ್ರುವ ಸರ್ಜಾ ಅವರೇ ಸ್ಪಷ್ಟಪಡಿಸಿದ್ದು ಪೊಗರು ಚಿತ್ರದ ಆಡಿಯೋ ಬಿಡುಗಡೆಯ ಸಮಾರಂಭದಲ್ಲಿ ಈ ಬಗ್ಗೆ ಹೇಳಿದ್ದಾರೆ.

ವಿಶೇಷ ಎಂದರೆ ರಾಜ ಮಾರ್ತಾಂಡ ಸಿನಿಮಾ ಚಿರು ಸರ್ಜಾ ಶೂಟಿಂಗ್ ಮಾಡಿದ ಕೊನೆ ಚಿತ್ರವಾಗಿದ್ದು ಚಿತ್ರದ ಚಿರು ಪಾತ್ರಕ್ಕೆ ಸಹೋದರ ದ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ‘ರಾಜಮಾರ್ತಾಂಡ’ ಸಿನಿಮಾದ ಟ್ರೈಲರ್​ ಪೊಗರು ಸಿನಿಮಾದ ಜೊತೆಗೆ ಬಿಡುಗಡೆಯಾಗುತ್ತಿರುವುದು ಸರ್ಜಾ ಫ್ಯಾಮಿಲಿಯ ಅಭಿಮಾನಿಗಳಿಗೆ ವಿಶೇಷ ಮತ್ತು ಭಾವನಾತ್ಮಕ ವಿಚಾರವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top