fbpx
ಸಮಾಚಾರ

ಫೇಸ್ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಎಂ.ಎಸ್‌.ಧೋನಿ ಸಿನಿಮಾದ ನಟ ಸಂದೀಪ್‌ ನಾಹರ್‌ ಆತ್ಮಹ’ತ್ಯೆ

ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣ ಇನ್ನೂ ಹೊಗೆಯಾಡುತ್ತಿರುವಂತೆಯೇ ಅವರ ಸಹನಟರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಎಂಎಸ್ ಧೋನಿ- ದಿ ಅನ್​ಟೋಲ್ಡ್ ಸ್ಟೋರಿ’ ಎಂಬ ಚಿತ್ರದಲ್ಲಿ ಸುಶಾಂತ್ ಜೊತೆ ಅಭಿನಯಿಸಿದ್ದ ನಟ ಸಂದೀಪ್ ನಾಹರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೀವನ ಅಂತ್ಯ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ನಟ ಸಂದೀಪ್‌ ನಾಹರ್‌ ಫೇಸ್‌ಬುಕ್‌ನಲ್ಲಿ ಸುದೀರ್ಘ ಬರಹದ ಪೋಸ್ಟ್‌ ಮತ್ತು ವಿಡಿಯೊ ಹಂಚಿಕೊಂಡಿದ್ದರು. ಪೋಸ್ಟ್‌ ಪ್ರಕಾರ, ಅವರು ವೈಯಕ್ತಿಕ ಮತ್ತು ವೃತ್ತಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಮುಂಬೈನ ತಮ್ಮ ಗೋರೆಗಾಂವ್‌ ನಿವಾಸದಲ್ಲಿ ಸಂದೀಪ್‌ ನಹಾರ್‌ ಶವ ಪತ್ತೆಯಾಗಿದೆ. ವಿಡಿಯೋ ಜೊತೆಗೆ ಸಂದೀಪ್‌ ಡೆತ್‌ನೋಟ್‌ ಬರೆದಿದ್ದಾರೆ ಎಂದು ಹೇಳಲಾಗಿದೆ . ಸಂದೀಪ್ ನಾಹರ್​ ನಟ ಅಕ್ಷಯ್​ ಕುಮಾರ್ ಅವರ ನಾಯಕತ್ವದ ಕೇಸರಿ ಸಿನಿಮಾದಲ್ಲಿ ಸಹ ನಟಿಸಿದ್ದರು. ಇದೀಗ, ನಟ ಸಂದೀಪ್‌ ಸಾವಿನ ಬಗ್ಗೆ ಮುಂಬೈ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top