fbpx
ಸಮಾಚಾರ

ಸನ್ಮಾನ ಕಾರ್ಯಕ್ರಮಕ್ಕೆ ಅಪ್ಪನ ಆಟೋದಲ್ಲಿ ಬಂದ ಮಿಸ್‌ ಇಂಡಿಯಾ ರನ್ನರ್ ಅಪ್ ಮಾನ್ಯಾ!

ಮಿಸ್‌ ಇಂಡಿಯಾ 2020ರ ರನ್ನರ್ ಅಪ್‌ ಮಾನ್ಯಾ ಸಿಂಗ್ ತನ್ನ ತಂದೆಯ ಆಟೋ ರಿಕ್ಷಾದಲ್ಲಿ ಮುಂಬೈನಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಮುಂಬೈನ ಠಾಕೂರ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಮಾನ್ಯಾರವರ ತಂದೆ ತಾಯಿಯನ್ನೂ ಸನ್ಮಾನಿಸಿದ್ದಾರೆ.

 

 

View this post on Instagram

 

A post shared by Femina Miss India (@missindiaorg)

 

ಮಾನ್ಯಾ ತಂದೆ ಆಟೋ ರ್ಯಾಲಿ ಆಯೋಜಿಸಿದ್ದು, ಇದರ ಮುಂದಾಳತ್ವ ಖುದ್ದು ಅವರೇ ವಹಿಸಿದ್ದರು. ಆಟೋ ಹಿಂದಿನ ಸೀಟಿನಲ್ಲಿ ಮಾನ್ಯಾ ಹಾಗೂ ಆಕೆಯ ತಾಯಿ ಕುಳಿತುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಪೋಟೋ ಭಾರೀ ವೈರಲ್ ಆಗಿದೆ.

ಓರ್ವ ಆಟೋ ಚಾಲಕನ ಮಗಳಾಗಿರುವ ಮಾನ್ಯಾ ಮಿಸ್‌ ಇಂಡಿಯಾ 2020ರ ರನ್ನರ್ ಅಪ್‌ ಕೂಡಾ ಆಗಿದ್ದಾರೆ. ಇದು ಕೇವಲ ಆಕೆ ತಂದೆ, ತಾಯಿ ಮಾತ್ರವಲ್ಲ ಇಡೀ ರಾಜ್ಯಕ್ಕೇ ಹೆಮ್ಮೆಯ ವಿಚಾರ. ಮಿಸ್​ ಇಂಡಿಯಾ ರನ್ನರ್​ ಅಪ್ ಆದರೂ ತಮ್ಮ ಹಳೆಯ ಕಷ್ಟದ ದಿನಗಳನ್ನು ಮರೆಯದೆ ಎಂದಿನಂತೆ ಇದ್ದಾರೆ. ಇದು ಮಾನ್ಯಾಳ ಸರಳ ಜೀವನವನ್ನು ತೋರ್ಪಡಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top