fbpx
ಸಮಾಚಾರ

ಸಮುದ್ರದಲ್ಲಿ ಪುನೀತ್ ರಾಜ್ ಕುಮಾರ್ ಬ್ಯಾಕ್ ಡೈವ್ ಸಾಹಸ – ವಿಡಿಯೋ ವೈರಲ್

ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ವರ್ಕೌಟ್, ಡ್ಯಾನ್ಸ್, ಸೈಕ್ಲಿಂಗ್ ಅಂತ ಆಗಾಗ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಫಿಟ್​ನೆಸ್ ಫ್ರೀಕ್ ಅಪ್ಪು ಮಾಡಿರೋ ಮತ್ತೊಂದು ಸಾಹಸದ ವಿಡಿಯೋ ಈಗ ಅಭಿಮಾನಿಗಳ ಮೈ ಜುಮ್ ಎನಿಸಿದೆ.

 

 

ಪವರ್ ಸ್ಟಾರ್ ಸಮುದ್ರದಲ್ಲಿ ಬ್ಯಾಕ್ ಡೈವ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಇದು ಹೇಗೆ ಎಂದು ಅಚ್ಚರಿಯ ಕಾಮೆಂಟ್ ಮಾಡುತ್ತಾ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

‘ಬ್ಯಾಕ್ ಡೈವ್ ನೆನಪು. ವಿಭಿನ್ನ ಪ್ರಪಂಚಕ್ಕೆ ಡೈವ್ ಮಾಡುತ್ತಿರುವುದು’ ಎಂದು ಬರೆದುಕೊಂಡು ಡೈವ್ ಮಾಡುತ್ತಿರುವ ವೀಡೀಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋಗೂ ಮೊದಲು ಅಪ್ಪು ದಯವಿಟ್ಟು ಯಾರು ಈ ರೀತಿ ಪ್ರಯತ್ನ ಮಾಡಬೇಡಿ ಎನ್ನುವ ಸೂಚನೆ ನೀಡಿದ್ದಾರೆ. ಪವರ್ ಸ್ಟಾರ್ ಸಾಹಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top