fbpx
ಸಮಾಚಾರ

“ಯಡಿಯೂರಪ್ಪಗೆ ಧಮ್ ಇಲ್ಲ. ಧಮ್ ಲೆಸ್, ಹೇಡಿ ಮುಖ್ಯಮಂತ್ರಿ.” ಸಿದ್ದರಾಮಯ್ಯ ವಾಗ್ದಾಳಿ

“ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಭಯ ಕಾಡುತ್ತಿದ್ದು, ಗಡ ಗಡ ನಡುಗುತ್ತಾರೆ. ಯಡಿಯೂರಪ್ಪಗೆ ಧಮ್ ಇಲ್ಲ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ

ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿಯ ಹಣ ಕೇಳುವ ಧೈರ್ಯ ಬಿಜೆಪಿಯವರಿಗೆ ಇಲ್ಲ. ಯಡಿಯೂರಪ್ಪಗೆ ಧಮ್ ಇಲ್ಲ. ಧಮ್ ಲೆಸ್, ಹೇಡಿ ಮುಖ್ಯಮಂತ್ರಿ. ನಿಮ್ಮ ಶಿಫಾರಸ್ಸು ನಾನು ಒಪ್ಪಲ್ಲ. ಹಣ ಕೊಡಲ್ಲ ಎಂದು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯಡಿಯೂರಪ್ಪ ನಿರ್ಮಲಾ ಮನೆ ಮುಂದೆ ಹೋಗಿ ಕೇಳಿದ್ದಾರಾ..?. ಈ ತರಹದ ಸಿಎಂ ರಾಜ್ಯದಲ್ಲಿ ಇರಬೇಕಾ..? ಕಿತ್ತು ಎಸೆಯಬೇಕು ಎಂದು ಕಿಡಿಕಾರಿದರು.

“ಪ್ರಧಾನಿ ಮೋದಿಯ ತಮ್ಮ ತಾಳಕ್ಕೆ ಯಡಿಯೂರಪ್ಪ ಒಬ್ಬರನ್ನೇ ಕುಣಿಸುತ್ತಿಲ್ಲ. ಇಡೀ ದೇಶದ ಜನರನ್ನು ಕುಣಿಸುತ್ತಿದ್ದಾರೆ. ಕೊರೊನಾ ನಿಯಂತ್ರಣ ಮಾಡಲಾಗಲಿಲ್ಲ. ಬರೀ ಜಾಗಟೆ, ಚಪ್ಪಾಳೆ, ದೀಪ ಹಚ್ಚುವಂತೆ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಕೇಂದ್ರ ಸರಕಾರ ಹೇಳುವುದಕ್ಕೆ ಸಿಎಂ ಯಡಿಯೂರಪ್ಪ ತಲೆಯಾಡಿಸುತ್ತಾರೆ. ಪ್ರಧಾನಿ ಮೋದಿ ಮುಂದೆ ಮಾತನಾಡಲು ಯಡಿಯೂರಪ್ಪಗೆ ಧಮ್ ಇಲ್ಲ. 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ 5,049 ಕೋಟಿ ರೂ. ಬಿಡುಗಡೆ ಮಾಡದೆ ಇದ್ದರೂ ಈತನಕ ಕೇಳಿಲ್ಲ,” ಎಂದು ದೂರಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top