fbpx
ಸಮಾಚಾರ

“ದೇವರ ಬಗ್ಗೆ ಮಾತನಾಡೋವಾಗ ನಾಲಿಗೆ ಹಿಡಿತದಲ್ಲಿರಲಿ” ಕಾಂಗ್ರೆಸ್ ಶಾಸಕನಿಗೆ ಟಗರು ನಿರ್ಮಾಪಕ ಎಚ್ಚರಿಕೆ

ವರನಟ ಡಾ. ರಾಜ್‌ಕುಮಾರ್​​ ಬಗೆಗೆ ಅಗೌರವವಾಗಿ ಮಾತನಾಡಿರುವ ಶಾಸಕ ಎನ್​​.ಎ. ಹ್ಯಾರಿಸ್ ಗೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್​ ತಕ್ಕ ಉತ್ತರ ನೀಡಿದ್ದಾರೆ. ಶಿವರಾಜ್ ಕುಮಾರ್ ನಟನೆಯ ಟಗರು ಚಿತ್ರವನ್ನು ನಿರ್ಮಾಣ ಮಾಡಿದ್ದ ಶ್ರೀಕಾಂತ್ ಅವರು “ದೇವರ ಬಗ್ಗೆ ಮಾತನಾಡೋವಾಗ ನಾಲಿಗೆ ಹಿಡಿತದಲ್ಲಿರಲಿ” ಎಂದು ಹೇಳುವ ಮೂಲಕ ಹ್ಯಾರಿಸ್ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

 

 

ಈ ಬಗ್ಗೆ ಟ್ವೀಟ್ ಮಾಡಿ “ಕರ್ನಾಟಕದ ದೇವರ ಬಗ್ಗೆ ಮಾತನಾಡುವಾಗ ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿಡಿ ಜನರು ತಮ್ಮ ಬದುಕಿನಲ್ಲಿ ಅವರಿಗೆ ದೊಡ್ಡ ಸ್ಥಾನವನ್ನು ನೀಡಿದ್ದಾರೆ…. ನಮಗೆ ಯಾರ ಅನುಮತಿಯ ಅಗತ್ಯವಿಲ್ಲ” ಎಂದು ಕೆಪಿ ಶ್ರೀಕಾಂತ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾ.ರಾಜ್‌ಕುಮಾರ್​ ಅವರ ಪ್ರತಿಮೆ ಸ್ಥಾಪನೆ ವಿಚಾರವಾಗಿ ಶಾಸಕ ಹ್ಯಾರಿಸ್ ಮಾತನಾಡಿದ್ದರೆನ್ನಲಾದ ವಿಡಿಯೋ ಒಂದು ವೈರಲ್ ಆಗಿತ್ತು. ಅದರಲ್ಲಿ ಹ್ಯಾರಿಸ್ “ಪ್ರತಿಮೆಯನ್ನು ಸ್ಥಾಪಿಸಿದ್ದಾಗಿದೆ ಅದಕ್ಕೆ ರಕ್ಷಣೆ ಏಕೆ? ರಕ್ಷಣೆ ನೀಡೋದಾದರೆ ಅದನ್ನು ಮನೆಯಲ್ಲೇ ಇರಿಸಿಕೊಳ್ಳಬಹುದಲ್ಲ, ಹೊರಗೆ ಇಡೋದೇಕೆ?” ಎಂದು ಹೇಳಿದ್ದರು. ಇದು ರಾಜ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top