fbpx
ಸಮಾಚಾರ

ಜೂನಿಯರ್​ ಉಪೇಂದ್ರ ನಿಧನ

ಜೂನಿಯರ್​ ಉಪೇಂದ್ರ ಎಂದೇ ಹೆಸರಾಗಿದ್ದ ಮುಧೋಳ್​ ನಗರದ ಲಕ್ಷಣ ಅಂಬಿಗೇರ (30) ಅವರು ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ. ಅಂಬಿಗೇರ ಅವರ ಮುಧೋಳ ನಗರದ ಜೂನಿಯರ್ ಉಪೇಂದ್ರ ಎಂದೇ ಪರಿಚಿತರಾಗಿದ್ದರು. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಅಂಬಿಗೇರ ಅವರು ಆರ್ಕೆಸ್ಟ್ರಾ ಹಾಗೂ ರಸಮಂಜರಿ ಕಾರ್ಯಕ್ರಮ ಕಲಾವಿದ. ನಟ ಉಪೇಂದ್ರ ಅವರ ಮಿಮಿಕ್ರಿ ಹಾಗೂ ನಟನೆ ಮೂಲಕ ಜೂನಿಯರ್ ಉಪೇಂದ್ರ ಎಂಬ ಹೆಸರು ಪಡೆದುಕೊಂಡಿದ್ದರು. ಅಲ್ಲದೆ, ಅಭಿಮಾನಿಗಳನ್ನು ಸಹ ಹೊಂದಿದ್ದರು. ಅವರನ್ನು ನೋಡಿದ ಅನೇಕರು ಅವರೊಂದಿಗೆ ಸೆಲ್ಫಿಯನ್ನು ತೆಗೆದುಕೊಳ್ಳುತ್ತಿದ್ದರು.

ಭಾನುವಾರ ರಾತ್ರಿ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣಕ್ಕೆ ಕಾರ್ಯಕ್ರಮ ನೀಡಲು ಹೋಗಿದ್ದರು. ಎರಡನೇ ಬಾರಿ ವೇದಿಕೆಗೆ ಹೋದಾಗ ಎದೆನೋವು ಕಾಣಿಸಿಕೊಂಡಿದ್ದು, ಕಾರ್ಯಕ್ರಮ ಅರ್ಧಕ್ಕೆ ಬಿಟ್ಟು ಚಿಕಿತ್ಸೆಗಾಗಿ ಮುಧೋಳ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ, ಆಸ್ಪತ್ರೆಯ ವೀಲ್​ ಚೇರ್ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಂಬಿಗೇರ ಸಾವಿಗೆ ಆಪ್ತರು ಕಂಬನಿ ಮಿಡಿದಿದ್ದಾರೆ. ಮುಧೋಳ ನಗರದ ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top