fbpx
ಸಮಾಚಾರ

ಶಿವಾಜಿ ಜಯಂತಿ ಆಚರಣೆ, ಸರ್ಕಾರದ ಕ್ರಮಕ್ಕೆ ವೈಎಸ್‌ವಿ ದತ್ತ ಅಸಮಾಧಾನ

ರಾಜ್ಯ ಸರ್ಕಾರವು ಶಿವಾಜಿ ಮಹಾರಾಜರ ಜಯಂತಿ ಆಚರಿಸುತ್ತಿರುವುದನ್ನು ಜೆಡಿಎಸ್ ಮುಖಂಡ ವೈಎಸ್‌ವಿ ದತ್ತಾ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು ಕರ್ನಾಟಕಕ್ಕೆ ಶಿವಾಜಿ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.

 

 

‘ಶ್ರೀ ಕೃಷ್ಣದೇವರಾಯ, ಇಮ್ಮಡಿ ಪುಲಿಕೇಶಿ ಅಂತಹ ಅರಸರನ್ನು ಸೌಜನ್ಯಕ್ಕೂ ನೆನೆಯದ ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲದ ಕನ್ನಡಕ್ಕೆ ಎಳ್ಳಷ್ಟೂ ಕೊಡುಗೆ ನೀಡದ ಮಹಾರಾಷ್ಟ್ರದ ರಾಜನ ಜನ್ಮದಿನವನ್ನು ಆಚರಣೆ ಮಾಡುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಎಂಬ ಸಣ್ಣ ಕಲ್ಪನೆ ರಾಜ್ಯ ಸರ್ಕಾರಕ್ಕೆ ಇಲ್ಲವೇ.?’ ಎಂದು ವೈಎಸ್‌ವಿ ದತ್ತಾ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಕನ್ನಡ ರಾಜ್ಯದ ಮೇಲೆ ದಂಡೆತ್ತಿ ಬಂದು ಕನ್ನಡಿಗರನ್ನು ಕಾಡಿದ ಕಡೆಗೆ ಕನ್ನಡದ ವೀರವನಿತೆಯ ಬಳಿ‌ ಆಶ್ರಯ ಪಡೆದಿದ್ದವನನ್ನು ರಾಜ್ಯ ಸರ್ಕಾರ ಈ ರೀತಿ ಮೆರೆಸುತ್ತಿರುವುದು ಸಮಸ್ತ ಕನ್ನಡ ಕುಲ ಕೋಟಿಗೆ ಮಾಡುತ್ತಿರುವ ಅವಮಾನವೇ ಸರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top