fbpx
ಸಮಾಚಾರ

ಡ್ರಗ್ಸ್ ಸಾಗಿಸುತ್ತಿದ್ದ ಬಿಜೆಪಿ ಯುವ ನಾಯಕಿಯ ಬಂಧನ

100 ಗ್ರಾಂ ಕೊಕೇನ್ ಕೈವಶವಿರಿಸಿಕೊಂಡ ಆರೋಪದಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಯುವ ನಾಯಕಿ ಪಮೇಲಾ ಗೋಸ್ವಾಮಿ ಅವರನ್ನು ಶುಕ್ರವಾರ ಬಂಧಿಸಲಾಗಿದೆ. ಪಮೇಲಾ ಅವರ ಕಾರಿನ ಸೀಟಿನಡಿಯಲ್ಲಿ ಮತ್ತು ಪರ್ಸ್​ನಲ್ಲಿ ಲಕ್ಷಗಟ್ಟಲೆ ರೂಪಾಯಿ ಬೆಲೆ ಬಾಳುವ ಕೊಕೇನ್ ಪತ್ತೆಯಾಗಿತ್ತು. ಬಂಗಾಳದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಪಮೇಲಾ ಗೋಸ್ವಾಮಿ.

ಶುಕ್ರವಾರ ದಕ್ಷಿಣ ಕೋಲ್ಕತಾದ ನ್ಯೂ ಅಲಿಪೋರ್‌ ಎಂಬಲ್ಲಿ ಪಮೇಲಾ ಅವರು ತಮ್ಮ ಸ್ನೇಹಿತ ಪ್ರಬೀರ್‌ ಕುಮಾರ್‌ ಡೇ ಜೊತೆಗಿದ್ದರು. ಈ ವೇಳೆ ಅವರ ಕಾರು ಮತ್ತು ಹ್ಯಾಂಡ್‌ಬ್ಯಾಗ್‌ನಲ್ಲಿ 100 ಗ್ರಾಂನಷ್ಟು ಕೊಕೇನ್‌ ಪತ್ತೆಯಾಗಿದೆ. ಹೀಗಾಗಿ ಈ ಇಬ್ಬರನ್ನೂ ಬಂಧಿಸಲಾಗಿದೆ ಎಂದಿದ್ದಾರೆ ನ್ಯೂ ಅಲಿಪೋರ್‌ ಪೊಲೀಸರು.

ಗೋಸ್ವಾಮಿ ಹಾಗೂ ಅವರ ಸಹವರ್ತಿ ಎನ್.ಆರ್. ಅವೆನ್ಯೂ ಕೆಫೆಯೊಂದಕ್ಕೆ ತೆರಳಿದ್ದಾಗ ಪೊಲೀಸರು ಅವರ ಮೇಲೆ ದಾಳಿ ನಡೆಸಿದ್ದರು. ಗೋಸ್ವಾಮಿಯವರ ಪರ್ಸ್ ಹಾಗೂ ಕಾರಿನ ಸೀಟಿನ ಕೆಳಗಿರುವ ಚೀಲವನ್ನು ಶೋಧಿಸಿದಾಗ ಸುಮಾರು 100ಗ್ರಾಂ ಕೊಕೇನ್ ಕಂಡುಬಂದಿದೆ. ಕೂಡಲೇ ಅವರನ್ನು ಪೊಲೀಸರು ಕರೆದೊಯ್ದರು. ಪೊಲೀಸರು ಗೋಸ್ವಾಮಿಯವರನ್ನು ಕರೆದೊಯ್ಯುತ್ತಿದ್ದಾಗ ಅವರು ಕೂಗಾಡಿದರು. ಗೋಸ್ವಾಮಿಗೆ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯನ್ನು ಕೂಡ ಬಂಧಿಸಲಾಗಿದೆ. ಆತ ಕೂಡ ಕಾರಿನಲ್ಲಿದ್ದ ಎಂದು ವರದಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top