fbpx
ಸಮಾಚಾರ

ವಿಶ್ವ ಮಾತೃ ಭಾಷೆಯ ದಿನದಂದೇ ಮಾತೃ ಭಾಷೆಯನ್ನೇ ಮರೆತ ಸಿಎಂ ಯಡಿಯೂರಪ್ಪ

ಫೆಬ್ರವರಿ 21 ನ್ನು ಪ್ರಪಂಚಾದ್ಯಂತ ವಿಶ್ವ ಮಾತೃ ಭಾಷೆ ದಿನವಾಗಿ ಆಚರಿಸಲಾಗುತ್ತದೆ. ನಾಗರೀಕ ಸಮಾಜದಲ್ಲಿ ವ್ಯಕ್ತಿಯೊಬ್ಬನನ್ನ ಪರಿಪಕ್ವವಾಗಿಸುವಲ್ಲಿ ಮಾತೃಭಾಷೆ ಮುಖ್ಯ ಪಾತ್ರ ವಹಿಸುತ್ತದೆ. ಎಷ್ಟೇ ಭಾಷೆ ಕಲಿತಿದ್ದರೂ ಅದನ್ನ ಮಾತೃಭಾಷೆಯಿಂದಲೇ ಅರ್ಥೈಸಿಕೊಳ್ಳಬೇಕು. ಹಾಗಾಗಿಯೇ ಪ್ರತಿಯೊಬ್ಬರಿಗೂ ತಮ್ಮ ಮಾತೃ ಭಾಷೆ ಎಂದರೆ ಭಾವನಾತ್ಮಕ ಸಂಭಂದ ಬೆಸೆದುಕೊಂಡಿರುತ್ತದೆ.

 

 

ಮಾತೃ ಭಾಷಾ ದಿನಂದ ಅಂಗವಾಗಿ ಜನರು ತಂತಮ್ಮ ಮಾತೃಭಾಷೆಗಳ ಮೇಲಿರುವ ಪ್ರೀತಿಯನ್ನು ವಿಶೇಷವಾಗಿ ತಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ಕನ್ನಡಿಗರು ಕೂಡ ನಮ್ಮ ಹೆಮ್ಮೆಯ ಕನ್ನಡ ಭಾಷೆಯ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತ್ರ ಮಾತೃಭಾಷಾ ದಿನದಂದೇ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ ಅರ್ಥಾತ್ ನಿರ್ಲಕ್ಷ್ಯ ಮಾಡಿದ್ದಾರೆ.

ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆ ‘ಖೇಲೋ ಇಂಡಿಯಾ’ದ ಎರಡನೇ ಆವೃತ್ತಿ ಕರ್ನಾಟಕದಲ್ಲಿ ನಡೆಯಲಿದೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಈ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ನಾಮಫಲಕಗಳು ಕೇವಲ ಆಂಗ್ಲ ಭಾಷೆಯಲ್ಲಿ ಮಾತ್ರದಲ್ಲಿದ್ದು ಎಲ್ಲಿಯೂ ಒಂದಕ್ಷರ ಕನ್ನಡ ಕಾಣುವುದಿಲ್ಲ. ಕಾರ್ಯಕ್ರಮ ಕರ್ನಾಟಕದಲ್ಲಿ ನಡೆಯುತ್ತಿರುವುದರಿಂದ ಇಂಗ್ಲಿಷ್ ಜೊತೆಗೆ ಕನ್ನಡವನ್ನು ಕೂಡ ಬಳಸಬಹುದಿತ್ತು,. ಆದರೆ ಮುಂಚಿನಿಂದಲೂ ಕನ್ನಡ ಭಾಷೆ ಮೇಲೆ ನಿರ್ಲ್ಯಕ್ಷ ಹೊಂದಿರುವ ಸರ್ಕಾರ ಮತ್ತೆ ಕನ್ನಡ ಕಡೆಗಣನೆ ಮಾಡಿದೆ..

ವಿಶ್ವ ಮಾತೃ ಭಾಷಾ ದಿನವೇ ಕನ್ನಡವನ್ನು ಮರೆತ ಸಿಎಂ ಯಡಿಯೂರಪ್ಪ ವಿರುದ್ಧ ಕನ್ನಡಾಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top