ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಬಾಲಿವುಡ್ ಸ್ಟಾರ್ ಕಪಲ್ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ದಂಪತಿಗೆ ಗಂಡು ಮಗುವಾಗಿದೆ. ನಿನ್ನೆ ಅಂದರೆ ಭಾನುವಾರ ಫೆ. 21ರಂದು ಮುಂಬೈನ ಬ್ರಿಡ್ಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಕರೀನಾ ಕಪೂರ್. ಕಪೂರ್ ಹಾಗೂ ಖಾನ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬೆಳಿಗ್ಗೆ ಕರೀನಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಮೂಲಕ ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ದಂಪತಿ ಎರಡನೇ ಮಗುವಿನ ಪೋಷಕರಾಗಿದ್ದಾರೆ. ಕರೀನಾ ಕಪೂರ್ ಆಪ್ತ ಸ್ನೇಹಿತ ಮನೀಶ್ ಮಲ್ಹೋತ್ರಾ, ಸಹೋದರಿ ರಿದ್ಧಿಮಾ ಗಂಡು ಮಗುವಿನ ಆಗಮನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.
2012ರ ಅಕ್ಟೋಬರ್ನಲ್ಲಿ ನಟ ಸೈಫ್ ಅಲಿ ಖಾನ್ ಜೊತೆ ಕರೀನಾ ಕಪೂರ್ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2016ರ ಡಿಸೆಂಬರ್ನಲ್ಲಿ ಮೊದಲ ಮಗುವಿಗೆ ಕರೀನಾ ಜನ್ಮ ನೀಡಿದ್ದರು. ಮೊದಲ ಮಗುವಿಗೆ ತೈಮೂರ್ ಅಲಿ ಖಾನ್ ಅಂತ ಹೆಸರಿಟ್ಟಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
