fbpx
ಸಮಾಚಾರ

“ಹಿಂದೂ ವಿರೋಧಿ ಈ ಪಕ್ಷವನ್ನು ಸೋಲಿಸಿ” ಸಂಸದ ತೇಜಸ್ವಿ ಸೂರ್ಯ ಮನವಿ

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವನ್ನು “ಹಿಂದೂ ವಿರೋಧಿ” ಎಂದು ಕರೆದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಎಂಕೆ ಸ್ಟಾಲಿನ್ ಅವರ ಪಕ್ಷವನ್ನು ಸೋಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಸೇಲಂನಲ್ಲಿ ಭಾನುವಾರ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಡಿಎಂಕೆ ಪಕ್ಷವೂ ಹಿಂದೂ ವಿರೋಧಿಯಾಗಿರುವ ಕೆಟ್ಟ ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಬ್ಬ ತಮಿಳಿಗ ಹೆಮ್ಮೆಯ ಹಿಂದೂ. ಇದು ದೇಶದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ಪವಿತ್ರ ಭೂಮಿ ಎಂದು ಹೇಳಿದರು.

ತಮಿಳುನಾಡಿನ ಪ್ರತಿ ಇಂಚು ಪವಿತ್ರವಾಗಿದೆ, ಆದರೆ, ಇಲ್ಲಿನ ಡಿಎಂಕೆ ಹಿಂದೂ ವಿರೋಧಿಯಾಗಿದೆ. ಆದ್ದರಿಂದ ನಾವು ಡಿಎಂಕೆಯನ್ನು ಸೋಲಿಸಲೇಬೇಕು ಎಂದ ಅವರು, ತಮ್ಮ ಪಕ್ಷವು ತಮಿಳುನಾಡು ಮತ್ತು ತಮಿಳು ಭಾಷೆಯ ಉತ್ಸಾಹವನ್ನು ಪ್ರತಿನಿಧಿಸುತ್ತದೆ ಎಂದು ಪ್ರತಿಪಾದಿಸಿದರು.

ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಗೌರವಿಸುವ ಮತ್ತು ಪ್ರೋತ್ಸಾಹಿಸುವ ಏಕೈಕ ಪಕ್ಷ ಎಂದರೆ, ಅದು ಭಾರತೀಯ ಜನತಾ ಪಕ್ಷ ಮಾತ್ರ. ತಮಿಳು ಉಳಿಯಬೇಕಾದರೆ ಹಿಂದುತ್ವ ಗೆಲ್ಲಬೇಕು. ಕನ್ನಡ ಗೆಲ್ಲಬೇಕಾದರೆ, ಹಿಂದುತ್ವ ಗೆಲ್ಲಬೇಕು ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top