fbpx
ಸಮಾಚಾರ

ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಪುತ್ರ ಪವನ್

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್‌. ನಾರಾಯಣ್‌ ಅವರ ಪುತ್ರ ಪವನ್‌ ಅವರು ಸೋಮವಾರ (ಫೆ.22) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪವಿತ್ರಾ ಎಂಬುವವರ ಜೊತೆ ಅವರ ಮದುವೆ ಸಮಾರಂಭ ನೆರವೇರಿದೆ. ಸೋಮವಾರ ಬೆಳಗ್ಗೆ 7.30ರಿಂದ 8.30ರವರೆಗೆ ಮದುವೆ ಶಾಸ್ತ್ರಗಳು ನಡೆದವು. ಕುಟುಂಬಸ್ಥರು, ಸ್ನೇಹಿತರು ಮತ್ತು ಆಪ್ತರ ಸಮ್ಮುಖದಲ್ಲಿ ಪವನ್‌-ಪವಿತ್ರಾ ಸಪ್ತಪದಿ ತುಳಿದರು. 10 ಗಂಟೆ ಬಳಿಕ ಶುರುವಾದ ಆರತಕ್ಷತೆ ಕಾರ್ಯಕ್ರಮಕ್ಕೆ ಹಲವು ಗಣ್ಯರು ಆಗಮಿಸಿ ಶುಭ ಕೋರಿದರು.

ಆರತಕ್ಷತೆಯಲ್ಲಿ ನಟ ಶರಣ್, ನಟ ಶ್ರೀಮುರಳಿ, ಸುಧಾರಾಣಿ, ಮಾಳವಿಕಾ ಅವಿನಾಶ್, ಅಮೂಲ್ಯ, ರಾಕ್ ಲೈನ್ ವೆಂಟೇಶ್, ಸುಮಲತಾ ಸೇರಿದಂತೆ ಹಲವು ಗಣ್ಯರು ಮದುವೆಯಲ್ಲಿ ಭಾಗಿಯಾಗಿ ನವವಧುವರರನ್ನು ಆಶಿರ್ವಧಿಸಿದ್ದಾರೆ. ಮದುವೆ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಪವನ್​, ತಮ್ಮ ತಂದೆಯ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ‌‌ ಕಾರ್ಯನಿರ್ವಹಿಸಿದ್ದಾರೆ. ಈ ವರ್ಷ ಸೆಟ್ಟೇರಿದ ಡಾರ್ಲಿಂಗ್​ ಕೃಷ್ಣ ಅಭಿನಯದ ‘ಶುಗರ್​ ಪ್ಯಾಕ್ಟರಿ’ ಚಿತ್ರದಲ್ಲಿ ಪವನ್​ ನಟಿಸಿದ್ದಾರೆ. ಅಲ್ಲದೇ, ‘ಮುತ್ತು ರತ್ನ’ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಪವನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ‘ನವಮಿ’ ಎಂಬ ಚಿತ್ರಕ್ಕೆ ಪವನ್ ನಿರ್ದೇಶನ ಮಾಡಿದ್ದಾರೆ. ಆದರೆ, ಈ ಎರಡು ಚಿತ್ರಗಳು ಇನ್ನೂ ಬಿಡುಗಡೆಗೊಂಡಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top