fbpx
ಸಮಾಚಾರ

ಆಡಿಯೋ ಕ್ಲಿಪ್ ವಿವಾದ: ಜಗ್ಗೇಶ್‌ ಜೊತೆ ಮಾತನಾಡಿದ ನಿರ್ಮಾಪಕ ಹೇಳಿದ್ದೇನು?

ನಟ ಜಗ್ಗೇಶ್ ಅವರು ನಿರ್ಮಾಪಕರೊಬ್ಬರ ಜೊತೆ ಮಾತನಾಡಿದ್ದ ಆಡಿಯೋ ಕ್ಲಿಪ್ ಒಂದು ಕಳೆದ ವಾರ ಚಂದನವನದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಆ ಆಡಿಯೋನಲ್ಲಿ ಜಗ್ಗೇಶ್ ಅವರು ನಟ ದರ್ಶನ್ ವಿರುದ್ಧ ಅವಹೇಳನಕಾಯಾಗಿ ಮಾತನಾಡಿದ್ದಾರೆ ಎಂಬುದು ಸುದ್ದಿಗೆ ಗ್ರಾಸವಾಗಿತ್ತು.. ನಂತರ ದರ್ಶನ್ ಅಭಿಮಾನಿಗಳು ಕೂಡ ಜಗ್ಗೇಶ್ ಗೆ ಮುತ್ತಿಗೆ ಹಾಕಿ ದಿಕ್ಕಾರ ಕೂಗಿದ್ದರು.

ಇಷ್ಟೆಲ್ಲಾ ಗಲಾಟೆಗಳು ನಡೆಯುತ್ತಿದ್ದರೂ ಅಂದು ಜಗ್ಗೇಶ್ ಜೊತೆ ಫೋನ್ ನಲ್ಲಿ ಮಾತನಾಡಿದ್ದ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದ ನಿರ್ಮಾಪಕ ವಿಖ್ಯಾತ್ ಮಾತ್ರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ನಿರ್ಮಾಪಕ ವಿಖ್ಯಾತ್ ಅವರು ಘಟನೆ ಬಗ್ಗೆ ಮೊದಲ ಬಾರಿಗೆ ಹೇಳಿಕೆ ನೀಡಿದ್ದು ಪ್ರತ್ರಿಕಾ ಪ್ರಕಟಣೆ ನೀಡಿದ್ದಾರೆ.

 

 

‘ನಟ ಜಗ್ಗೇಶ್‌ ಫೆ.9ರಂದು 8.30ಕ್ಕೆ ನನಗೆ ಫೋನ್‌ ಕಾಲ್‌ ಮಾಡಿದ್ದರು. ಈಗ ಎಲ್ಲಾ ಕಡೆ ವೈರಲ್‌ ಆಗಿರುವ ಅದೇ ಫೋನ್‌ ಕಾಲ್‌. ಅದರಲ್ಲಿ ಜಗ್ಗೇಶ್‌ ಅವರೊಂದಿಗೆ ಮಾತನಾಡಿರುವ ನಿರ್ಮಾಪಕ ನಾನೇ. ನನ್ನ ಜತೆ ಮಾತನಾಡಿರುವುದು ಜಗ್ಗೇಶ್‌ ಅವರೇ. ಈ ಫೋನ್‌ ಕಾಲ್‌ ಅನ್ನು ನಾನು ಯಾವುದೇ ಕಾರಣಕ್ಕೂ ರೆಕಾರ್ಡ್‌ ಮಾಡಿಕೊಂಡು ಚಿತ್ರದ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿಲ್ಲ. ದೇವರ ಮೇಲೆ ಪ್ರಮಾಣ ಮಾಡುತ್ತೇನೆ, ಇದು ಯಾರ ಕೆಲಸ ಎಂಬುದು ನನಗೆ ಗೊತ್ತಿಲ್ಲ’ ಎಂದು ವಿಖ್ಯಾತ್‌ ಹೇಳಿದ್ದಾರೆ.

 

 

‘ಈ ಫೋನ್‌ ಕಾಲ್‌ ಆಡಿಯೋ ಕ್ಲಿಪ್‌ ಹೇಗೆ ಲೀಕಾಯಿತು, ಹೇಗೆ ಹಂಚಿಕೆ ಆಯಿತು ಎಂಬುದು ಸಂಪೂರ್ಣವಾಗಿ ತನಿಖೆ ಆಗಲಿ. ಅದಕ್ಕೆ ನನ್ನ ಸಹಕಾರ ಇದೆ. ನಾನು ಆಡಿರುವ ಮಾತುಗಳ ಬಗ್ಗೆ ನನಗೆ ತಿಳುವಳಿಕೆ ಇದೆ. ಆದರೆ, ಆಡಿಯೋ ಕ್ಲಿಪ್‌ನಲ್ಲಿ ಜಗ್ಗೇಶ್‌ ಆಡಿರುವ ಮಾತುಗಳಿಗೆ ಅವರೇ ಜವಾಬ್ದಾರರು’ ಎಂದು ಅವರು ಹೇಳಿದ್ದಾರೆ.

ಜಗ್ಗೇಶ್‌ ಅವರು ಟ್ವಿಟರ್‌ ಮೂಲಕ ಸೂಚ್ಯವಾಗಿ ಆಪಾದಿಸಿದಂತೆ, ಈ ಆಡಿಯೋ ಕ್ಲಿಪ್‌ ಅನ್ನು, ನನ್ನ ಚಿತ್ರದ ಪ್ರಚಾರಕ್ಕಾಗಿ ಬಳಸಿದ್ದೇನೆ ಎಂಬ ಹೇಳಿಕೆಯನ್ನು, ನಾನು ಸ್ಪಷ್ಟವಾಗಿ ಈ ಪತ್ರದ ಮೂಲಕ ಅಲ್ಲಗಳೆಯುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಈ ರೀತಿಯ ಆಡಿಯೋ ಕ್ಲಪ್ ಬಹಿರಂಗಗೊಳಿಸುವ ಚೀಪ್ ಪ್ರಚಾರ ತಂತ್ರಗಳನ್ನು ಬಳಸುವ ಹುನ್ನಾರ ನಾನು ಮಾಡಿಲ್ಲವೆಂದು ಪ್ರಮಾಣೀಕರಿಸುತ್ತೇನೆ. ಕನ್ನಡ ಚಿತ್ರರಂಗದ ಒಳಿತಿಗಾಗಿ ನಾನೆಂದಿಗೂ ದುಡಿಯುತ್ತೇನೆ, ಬೆಂಬಲವಿರಲಿ’ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top