fbpx
ಸಮಾಚಾರ

ಸರ್ದಾರ್ ಪಟೇಲ್ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ; ರಾಷ್ಟ್ರಪತಿ​ ಉದ್ಘಾಟನೆ

ವಿಶ್ವದ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ಎಂಬ ಖ್ಯಾತಿಗೆ ಪಾತ್ರವಾಗುತ್ತಿರುವ ಮೊಟೆರಾದಲ್ಲಿರುವ ಸರ್ದಾರ್​ ವಲ್ಲಭಬಾಯಿ ಪಟೇಲ್​ ಕ್ರೀಡಾಂಗಣವನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣಗೊಳಿಸಲಾಗಿದ್ದು, ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಉದ್ಘಾಟಿಸಿದ್ದಾರೆ.

 

 

ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಆಡುತ್ತಿದೆ. ಸದ್ಯ ಮೂರನೇ ಟೆಸ್ಟ್‌ ಪಂದ್ಯ (ಫಿಂಕ್‌ಬಾಲ್ ಟೆಸ್ಟ್) ಇದೇ ಮೊಟೆರಾ ಸ್ಟೇಡಿಯಂನಲ್ಲಿ ಫೆಬ್ರವರಿ 24ರಂದು ಆರಂಭಗೊಂಡು ಫೆಬ್ರವರಿ 28ರಂದು ಕೊನೆಗೊಳ್ಳಲಿದೆ. ಕ್ರೀಡಾಂಗಣದ ಉದ್ಘಾಟನೆಯಲ್ಲಿ ಗೃಹ ಸಚಿವ ಅಮಿತ್​ ಶಾ ಹಾಗೂ ಕ್ರೀಡಾ ಸಚಿವ ಕಿರಣ್​ ರಿಜಿಜು ಭಾಗವಹಿಸಿದ್ದು, ಭೂಮಿ ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.

ಅಂದಹಾಗೆ 1983ರಲ್ಲಿ ಮೊಟೆರಾ ಸ್ಟೇಡಿಯಂ ಅನ್ನು ಉದ್ಘಾಟಿಸಲಾಗಿತ್ತು. ಆರಂಭದಲ್ಲಿ ಸ್ಟೇಡಿಯಂನ ಸಾಮರ್ಥ್ಯ ಗರಿಷ್ಠ 54,000 ಇತ್ತು. ಆದರೆ 2017ರಿಂದ ಸ್ಟೇಡಿಯಂ ಮರು ನಿರ್ಮಾಣ ಆರಂಭವಾಗಿತ್ತು. ಅಂದರೆ ಸ್ಟೇಡಿಯಂ ಅನ್ನು ವಸ್ತರಿಸುವ ಕಾರ್ಯ ನಡೆದಿತ್ತು. ಈಗ ಸ್ಟೇಡಿಯಂ ಸಾಮರ್ಥ್ಯವನ್ನು 54,000 ದಿಂದ 110000ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ವಿಶ್ವದಲ್ಲೇ ಅತೀ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಎಂಬ ಹೆಗ್ಗಳಿಕೆ ಈ ಸ್ಟೇಡಿಯಂ ಪಾತ್ರವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top