fbpx
ಸಮಾಚಾರ

“ಅವತ್ತು ಪೊಲೀಸರು ದರ್ಶನ್‌ನ ಚಪ್ಪಲಿ ಇಲ್ಲದೆ ನಿಲ್ಲಿಸಿದಾಗ, ಆಗ ಅವನ ಸಪೋರ್ಟ್‌ಗೆ ಬಂದಿದ್ದು ಯಾರು” ಜಗ್ಗೇಶ್ ಪ್ರಶ್ನೆ

ಕಳೆದೆರಡು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಉಂಟಾಗಿರುವ ವಿವಾದಗಳು ಸಣ್ಣದೇನಲ್ಲ. ಅದರಲ್ಲೂ ನಟ ಜಗ್ಗೇಶ್ ಮತ್ತು ದರ್ಶನ್ ಫ್ಯಾನ್‌ಗಳ ನಡುವಿನ ವಾಗ್ವಾದ ತಾರಕಕ್ಕೇರಿದೆ. ನಟ ಜಗ್ಗೇಶ್​ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರಿನಲ್ಲಿ ಹಿರಿಯ ನಟ ಜಗ್ಗೇಶ್​ ಸುದ್ದಿಗೋಷ್ಠಿ ನಡೆಸಿ ಬೇಸರ ಹೊರಹಾಕಿದ್ದಾರೆ.

ಪೋಲಿಸರು ಚಪ್ಪಲಿ ಇಲ್ಲದೆ ನಿಲ್ಲಿಸಿದ್ರಲ್ಲ, ಆಗ ಯಾರು ಬಂದಿದ್ರು ಅವನ ಸಪೋರ್ಟ್‌ಗೆ?
ನಟ ದರ್ಶನ್​​ನನ್ನು ನಾನು ಬಹಳ ಪ್ರೀತಿಸುತ್ತೇನೆ. ಅವತ್ತು ಪೋಲಿಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರಲ್ಲ, ಆಗ ಯಾರು ಬಂದಿದ್ರು ಅವನ ಸಪೋರ್ಟ್‌ಗೆ? ಆಗ ಬಂದಿದ್ದು ಜಗ್ಗೇಶ್ ಅಲ್ವಾ ನೀವೇ ಹೇಳಿ. ಚಪ್ಪಲಿ ಇಲ್ಲದೆ ನಿಲ್ಲಿಸೋದು ಸರಿಯಲ್ಲ. ದೊಡ್ಡ ನಟನನ್ನ ಸಣ್ಣ ಹೀರೋಯಿನ್ ಮನೆಯಲ್ಲಿ ನಿಲ್ಲಿಸಿದ್ರು. ಕಾನೂನು ಪ್ರಕಾರ ಕ್ರಮ ಕೈಗೊಂಡು ಆತನನ್ನ ಕಳುಹಿಸಿ ಎಂದು ಪೋಲಿಸರಿಗೆ ನಾನು ಹೇಳಿದ್ದೆ. ಇದನ್ನ ದರ್ಶನ್ ಕೂಡ ನೆನೆಯಬೇಕು ಎಂದು ಜಗ್ಗೇಶ್ ಹೇಳಿದರು.

“ಆತ ಈ ಘಟನೆ ಬಳಿಕ ನನಗೆ ಫೋನ್ ಮಾಡಬೇಕಿತ್ತು. ನನ್ನ ಹೆಂಡತಿ ಹೇಳ್ತಿದ್ಳು ‘ದರ್ಶನ್​ಗೆ ಆಕ್ಸಿಡೆಂಟ್ ಆದಾಗ ಕಾಲ್ ಮಾಡಿ ವಿಚಾರಿಸಿದ್ದೆ. ಈಗ ಎಲ್ಲಿದ್ದಾರೆ ಅವರೆಲ್ಲಾ?’ ಅಂತ. ಇದು ಕೃತಜ್ಞತೆ ಇಲ್ಲದ ಸಮಾಜ. ನನ್ನ ಕೈಕೆಳಗೆ ಎಷ್ಟೋ ನಟ-ನಟಿಯರು ತಯಾರಾಗಿದ್ದಾರೆ. ನಾನು ಅನ್ನೋದು, ವಯಸ್ಸು ಅನ್ನೋದು ಶಾಶ್ವತ ಅಲ್ಲ, ಕಡೆವರೆಗೂ ಬರುವುದು ಗುಣ ಅಷ್ಟೆ” ಎಂದು ಜಗ್ಗೇಶ್​ ಕಿಡಿಕಾರಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top