fbpx
ಸಮಾಚಾರ

ನಟ ಜಗ್ಗೇಶ್ ಬಳಿ ಕ್ಷಮೆಯಾಚಿಸಿದ ಡಿ ಬಾಸ್ ದರ್ಶನ್: ಹೇಳಿದ್ದೇನು ಗೊತ್ತಾ?

ದರ್ಶನ್‌ ಅಭಿಮಾನಿಗಳು ಮತ್ತು ನಟ ಜಗ್ಗೇಶ್‌ ಅವರ ನಡುವಿನ ಸಂಘರ್ಷ ಕಳೆದ ಒಂದು ವಾರದಿಂದ ಚರ್ಚೆಯಾಗುತ್ತಲೇ ಇತ್ತು ಇದೀಗ ಈ ವಿವಾದ ಸುಖಾಂತ್ಯ ಕಂಡಿದೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ದರ್ಶನ್ ಅವರು ಅಭಿಮಾನಿಗಳ ಪರವಾಗಿ ಜಗ್ಗೇಶ್ ಕ್ಷಮೆ ಕೇಳಿದ್ದಾರೆ. ಈ ಮೂಲಕ ಜಗ್ಗೇಶ್ ಮತ್ತು ದರ್ಶನ್ ಫ್ಯಾನ್ಸ್ ನಡುವಿನ ತಿಕ್ಕಾಟಕ್ಕೆ ತೆರೆ ಬಿದ್ದಂತಾಗಿದೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ದರ್ಶನ್​ ತಮ್ಮ ಅಭಿಮಾನಿಗಳ ಪರವಾಗಿ ಜಗ್ಗೇಶ್​ ಅವರ ಬಳಿ ಕ್ಷಮೆ ಕೇಳಿದ್ದಾರೆ. ಇನ್ನು ದರ್ಶನ್​ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಎಂದು ಕರೆಯುತ್ತಾರೆ. ಜಗ್ಗೇಶ್​ ಅವರು ನಮ್ಮ ಸೀನಿಯರ್​. ಅವರಲ್ಲದೆ ಬೇರೆಯವರು ನಮ್ಮ ಬಗ್ಗೆ ಮಾತನಾಡಲು ಸಾಧ್ಯವಾ ಎನ್ನುತ್ತಲೇ ಅಭಿಮಾನಿಗಳ ಪರವಾಗಿ ನಾನು ಜಗ್ಗೇಶ್​ ಅವರ ಬಳಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ಇದು ಯಾಕೆ ನಡೆಯಿತು ? ಎಲ್ಲಿಂದ ಶುರುವಾಯಿತು ಅಂತಾ ನಂಗೆ ಗೊತ್ತಿಲ್ಲ. ಅವತ್ತು ನಮ್ಮ ಹುಡುಗರು ಜಗ್ಗೇಶ್ ಅವರ ಬಳಿ ಹೋಗೋದು ನನಗೆ ಗೊತ್ತಿರಲಿಲ್ಲ, ಅಂದು ಗಮನಕ್ಕೆ ಬಂದಿದ್ದರೆ ಅಲ್ಲೆ ಬೈಯ್ತಿದ್ದೆ. ನಮ್ಮ ಸೆಲಬ್ರಿಟಿಗಳಿಂದ( ಅಭಿಮಾನಿಗಳು) ತೊಂದರೆಯಾಗಿದ್ದರೆ ನಾನು ಜಗ್ಗೇಶ್ ಅವರಿಗೆ ಕ್ಷಮೆ ಕೋರುತ್ತೇನೆ ಎಂದರು.

ಜಗ್ಗೇಶ್ ಮಾತಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ವಿವಾದದ ಬಗ್ಗೆ ಮಾತಾಡಿದ ದರ್ಶನ್, ಅವರು ನಮ್ಮ ಸೀನಿಯರ್. ನಮ್ಮ ಸೀನಿಯರ್ ಯಾವಾಗಲೂ ಮುಂದೆ ಇರಬೇಕು, ನಾವು ಅವರ ಹಿಂದೆ ಇರಬೇಕು. ನಮ್ಮ ಸೀನಿಯರ್ತಾನೇ (ಜಗ್ಗೇಶ್) ಮಾತಾಡಿದ್ದು ? ನಮ್ಮ ಬಗ್ಗೆ ಅವರನ್ನ ಬಿಟ್ಟು ಯಾರು ಮಾತಾಡಬೇಕು?ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

‘ವಿವಾದ ಆದ ದಿನ ನಾನು ತಿರುಪತಿಗೆ ಹೋಗಿದ್ದೆ. ಬರುವಾಗ ತಡರಾತ್ರಿ ಆಗಿತ್ತು. ಆ ವೇಳೆಗೆ ನಿರ್ಮಾಪಕ ವಿಖ್ಯಾತ್‌ ಅವರ ಸುಮಾರು 50ರಿಂದ 60 ಮಿಸ್ಡ್‌ ಕಾಲ್‌ಗಳು ಇದ್ದವು. ಆ ಹೊತ್ತಿನಲ್ಲಿ ಕರೆ ಮಾಡುವುದು ಸರಿಯಲ್ಲ ಎಂದು ಹೇಳಿ ಮರುದಿನ ಮಾತನಾಡಿದೆ. ಆಡಿಯೋ ಲೀಕ್ ಆಗಿರುವ ಬಗ್ಗೆ ನಿರ್ಮಾಪಕ ವಿಖ್ಯಾತ್ ಜತೆಗೂ ಮಾತಾಡಿದ್ದೇನೆ. ಯಾರು ಅದನ್ನ ಲೀಕ್ ಮಾಡಿದ್ದಾರೆ ಎಂದು ಆತನನ್ನ ಪ್ರಶ್ನಿಸಿದೆ.” ಎಂದು ದರ್ಶನ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top