fbpx
ಸಮಾಚಾರ

ಜಮೀರ್‌ ಅಹ್ಮದ್‌ ಮನೆಗೆ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಭೇಟಿ! ಫೋಟೋಗಳು ವೈರಲ್

ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರ ನಿವಾಸಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಭೇಟಿ ಕೊಟ್ಟಿದ್ದು ಇದಕ್ಕೆ ಸಂಭಂದಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ ಇದ್ದಕ್ಕಿಂತೆ ದರ್ಶನ್ ಅವರು ಜಮೀರ್ ಮನೆಗೆ ಭೇಟಿ ನೀಡಿದ್ದರ ಹಿಂದಿನ ಉದ್ದೇಶ ಏನು ಎಂಬುದರ ಬಗ್ಗೆ ತಿಳಿದುಬಂದಿಲ್ಲ

 

 

ತಮ್ಮ ಮನೆಗೆ ದರ್ಶನ್‌ ಭೇಟಿ ನೀಡಿದ ವಿಚಾರವನ್ನು ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದ್‌ ಅವರು ಸ್ವತಃ ಸೋಶಿಯಲ್‌ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಕೆಲವು ಫೋಟೋಗಳನ್ನು ಕೂಡ ಅವರ ಹಂಚಿಕೊಂಡಿದ್ದಾರೆ. ‘ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ದರ್ಶನ್ ತೂಗುದೀಪ್ ಅವರು ಇಂದು ನನ್ನ ನಿವಾಸಕ್ಕೆ ಆಗಮಿಸಿದ ಕ್ಷಣಗಳು’ ಎಂದು ಜಮೀರ್‌ ಕ್ಯಾಪ್ಷನ್‌ ನೀಡಿದ್ದಾರೆ.

ಅಂದಹಾಗೆ ಜಮೀರ್ ಪುತ್ರ ಝೈದ್‌ ಖಾನ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಜೈದ್ ಖಾನ್ ಅವರು ‘ಬನಾರಸ್’ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಹಾಡು ‘ಒಲವೇ ಮಂದಾರ’, ‘ಬೆಲ್ ಬಾಟಮ್’ ನಂತಹ ಹಿಟ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ಜಯತೀರ್ಥ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಈ ಕಾರಣದಿಂದಲೇ ಜಮೀರ್ ಇತ್ತೀಚಿಗೆ ಸಿನಿಮಾ ಮಂದಿಯ ಭೇಟಿಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top