fbpx
ಸಮಾಚಾರ

ಗೋವಾದಲ್ಲಿ ಕನ್ನಡಿಗರ ಮೇಲೆ ಗೂಂಡಾಗಿರಿ: ಕೈಮುಗಿದು ಗೋಗರಿದರೂ ಕರುಣೆ ತೋರದ ಗೋವಾ ಪುಂಡರು

ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯಗಳು ನಡೆಯುವ ಸುದ್ದಿಗಳು ಆಗ್ಗಾಗ್ಗೆ ಕೇಳಿ ಬರುತ್ತಿರುತ್ತವೆ. ಈ ಹಿಂದೆ ಗೋವಾದಲ್ಲಿ ನೆಲೆಸಿದ್ದ ಕನ್ನಡಿಗರ ಮನೆಗಳನ್ನು ದ್ವಂಸಗೊಳಿಸಿ ಕನ್ನಡಿಗರ ಬದುಕನ್ನು ಒಕ್ಕಲೆಬ್ಬಿಸಲಾಗಿತ್ತು. ಮಹದಾರಿ ವಿಚಾರವಾಗಿ ಕನ್ನಡಿಗರ ಮೇಲೆ ಕಿರುಕುಳ ನೀಡಿರುವ ವಿಚಾರವು ಕೂಡ ಸುದ್ದಿಯಾಗಿತ್ತು.. ಇದೀಗ ಗೋವಾ ಪುಂಡರಿಂದ ಮತ್ತೊಮ್ಮೆ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆದಿದೆ.

 

 

ಪ್ರವಾಸಕ್ಕೆಂದು ಗೋವಾಗೆ ತೆರಳಿದ್ದ ಕನ್ನಡಿಗರು ಬಯಲಲ್ಲಿ ಅಡುಗೆ ಮಾಡಿದ್ದಕ್ಕಾಗಿ ಅವರ ಮೇಲೆ ಗೋವಾ ಪೋಲಿಗಳು ಅವಾಚ್ಯ ಪದಗಳಿಂದ ಬೈದು ಹಲ್ಲೆಗೆ ಯತ್ನಿಸಿದ್ದಾರೆ. ಬಾಗಲಕೋಟೆಯ ಹುಡುಗರ ಗುಂಪೊಂದು ಗೋವಾ ಪ್ರವಾಸಕ್ಕೆ ತೆರಳಿತ್ತು. ಈ ವೇಳೆ ಬಯಲಲ್ಲಿ ಚಿಕ್ಕ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಅಡುಗೆ ತಯಾರಿಸಿಕೊಳ್ಳುತ್ತಿದ್ದ ವೇಳೆ ಕೆಲ ಗೋವಾ ಪುಂಡರು ಸ್ಥಳಕ್ಕೆ ಬಂದು ದಾಂದಲೆ ನಡೆಸಿದ್ದಾರೆ.

“ನಿಮಗಿಲ್ಲ ಅಡುಗೆ ಮಾಡಲು ಅವಕಾಶ ಕೊಟ್ಟಿದ್ಯಾರು? ಇದೇನು ನಿಮ್ಮ ಅಪ್ಪನ ಮನೆಯಾ? ಗೋವಾದಲ್ಲಿ ಹೋಟೆಲ್ ಇಲ್ಲವಾ? ನಾವು ಹಣ ಖರ್ಚು ಮಾಡಿ ಹೋಟೆಲ್ ನಡೆಸುತ್ತಿದ್ದೇವೆ ನೀವು ಹೀಗೆ ಅಡುಗೆ ಮಾಡಿಕೊಂಡು ತಿಂದರೆ ನಮ್ಮ ವ್ಯಾಪಾರ ಯಾರು ಮಾಡುವುದು? ಇಲ್ಯಾಕೆ ಅಡುಗೆ ಮಾಡುತ್ತೀರಿ? ಎಂದೆಲ್ಲ ಬಾಯಿಗೆ ಬಂದಂತೆ ಬೈಯ್ದು ನಿಂದಿಸಿದ್ದಾರೆ.

ನಮಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ, ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇವೆ, ನಮ್ಮನ್ನು ಬಿಟ್ಟು ಬಿಡಿ, ನಾವೀಗ ಹೋರಾಡುತ್ತೇವೆ ಎಂದೆಲ್ಲಾ ಕೇಳಿಕೊಂಡರು ಗೋವಾ ಪುಂಡರು ಕನ್ನಡಿಗರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಹಲವರು ಗೋವನ್ನರ ವರ್ತನೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top