fbpx
ಸಮಾಚಾರ

ಹೃದಯವಂತ ನಾಯಕ ಜಿಸಿ ಚಂದ್ರಶೇಖರ್

ಕನ್ನಡ ಚಿತ್ರರಂಗದಲ್ಲಿ ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಿರಿಯ ಕಲಾವಿದನಾಗಿ ನಟಿಸಿದ ಹಾಗೂ ಸಾವಿರಾರು ಧಾರಾವಾಹಿಗಳಲ್ಲಿ ದುಡಿರುವ ನಟ ಜಂಗ್ಲೀ ಪ್ರಸನ್ನ ಅವರ ಜೀವನ ಪರಿಸ್ಥಿತಿ ಹದಗೆಟ್ಟಿದ್ದು ಅವರ ಸಹಾಯಕ್ಕೆ ರಾಜ್ಯ ಸಭಾ ಸಂಸದ ಜಿಸಿ ಚಂದ್ರಶೇಖರ್ ಅವರು ಧಾವಿಸಿದ್ದಾರೆ.

 

 

ಜೀವನೋಪಾಯಕ್ಕಾಗಿ ನಟನೆಯನ್ನೇ ಅವಲಂಭಿಸಿದ್ದ ಪ್ರಸನ್ನ ಅವರಿಗೆ ಕಾಲ ಕ್ರಮೇಣ ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಸಿಗುವುದು ಕಡಿಮೆಯಾಗಿತ್ತು ಅಲ್ಲದೆ ಕೊರೋನಾ ಕಾರಣದಿಂದಾಗಿ ಅವಕಾಶಗಳೇ ನಿಂತುಹೋಗಿತ್ತು. ಕೆಲಸವೇ ಇಲ್ಲದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಸಮಯದಲ್ಲೇ ಪ್ರಸನ್ನ ಆರೋಗ್ಯದಲ್ಲಿ ಕೂಡ ಏರುಪೇರಾಗಿ ಹಾಸಿಗೆ ಹಿಡಿದು ಅವರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು.

ಗ್ಯಾಂಗ್ರಿನ್ ನಿಂದ ಬಳಲುತ್ತಿದ್ದ ಪ್ರಸನ್ನ ಅವರು ಇತ್ತೀಚಿಗಷ್ಟೇ ಚಸ್ತ್ರಚಿಕಿತ್ಸೆ ಮಾಡಿಕೊಂಡು ತಮ್ಮ ಒಂದು ಕಾಲನ್ನು ತೆಗಿಸಿಕೊಂಡಿದ್ದರು. ಕಾಲನ್ನು ತೆಗೆದಿರುವುದರಿಂದ ಕೃತಕ ಕಾಲಿನ ಜೋಡಣೆಗೆ ಹಣದ ಅವಶ್ಯಕತೆಯಿದ್ದು ಮುಂದಿನ ಚಿಕಿತ್ಸೆಗಾಗಿ ಹಣವಿಲ್ಲದೆ ಮನೆಯಲ್ಲಿಯೇ ಕಾಲ ಕಳಿಯುತ್ತಿದ್ದರು. ಜಂಗ್ಲೀ ಪ್ರಸನ್ನ ಅವರಿಗೆ ಇದೀಗ ಸಂಸದ ಜಿಸಿ ಚಂದ್ರಶೇಖರ್ ಅವರು ಸಹಾಯ ಮಾಡಿದ್ದು ಕೃತಕ ಕಾಲಿನ ಜೋಡಣೆ ಮಾಡಿಸಿದ್ದಾರೆ.

ಜಂಗ್ಲೀ ಪ್ರಸನ್ನ ಅವರ ಬಗ್ಗೆ ತಿಳಿದ ಚಂದ್ರಶೇಖರ್ ಅವರು ಕೃತಕ ಕಾಲಿನ ಜೋಡಣೆಗೆ ಅಗತ್ಯವಾದ ಆರ್ಥಿಕ ನೆರವು ನೀಡಿದ್ದಾರೆ. ಸದ್ಯ ಜಂಗ್ಲೀ ಪ್ರಸನ್ನ ಕೃತಕ ಕಾಲಿನ ಜೋಡಣೆ ಸಂಪೂರ್ಣವಾಗಿದ್ದು ಎರಡು ಕಾಲಿನಿಂದಲೂ ನಡೆಯಲು ಪ್ರಾರಂಭಿಸಿದ್ದಾರೆ.. ಸಹಾಯ ಮಾಡಿದ ಚಂದ್ರಶೇಖರ್ ಅವರಿಗೆ ಜಂಗ್ಲೀ ಪ್ರಸನ್ನ ಅವರು ಧನ್ಯವಾದ ಅರ್ಪಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top