ದೇಶದಲ್ಲಿ ಬೆಲೆ ಏರಿಕೆ ದಿನಬಳಕೆ ವಸ್ತುಗಳು, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆಗಳು ಲಂಗುಲಗಾಮಿಲ್ಲದೆ ಏರಿಕೆಯಾಗುತ್ತಿವೆ. ಅದರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದೇಶದಲ್ಲಿ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿದ್ದು ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ದೇಶದ ನಾನಾ ಕಡೆಗಳಲ್ಲಿ ಪೆಟ್ರೋಲ್ ಬೆಲೆ ಅದಾಗಲೇ ಶತಕ ಭರಿಸಿದ್ದು ಜನಸಾಮಾನ್ಯರ ಬದುಕು ದುಸ್ತರವಾಗಿದೆ.
ಮೊದಲೇ ಜನರು ಕೊರೋನಾ ಸಮಸ್ಯೆಯಿಂದ ಆರ್ಥಿಕವಾಗಿ ಕಷ್ಟ ಎದುರಿಸುತ್ತಿದ್ದಾರೆ. ಇದರ ನಡುವೆ ದಿನಬಳಕೆ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿರುವುದು ಗಾಯದ ಮೇಲೆ ಬರೆ ಹಾಕಿದಂತಿದಾಗಿದೆ. ಜನಸಾಮಾನ್ಯರ ಕಷ್ಟ ಆಲಿಸದೆ ಮಾನೋಸೋಯಿಚ್ಚೆ ಬೆಲೆ ಏರಿಕೆ ಮಾಡುತ್ತಿರುವ ಸರ್ಕಾರದ ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದಾರೆ.. ಈ ಎಲ್ಲಾ ವಿದ್ಯಮಾನಗಳ ನಡುವೆ ಟೀಮ್ ಮೋದಿ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗುತ್ತಿದ್ದಾರೆ..
ಸದ್ಯ ಶುಗರ್ ಕಾಯಿಲೆ ಇರೋ ಎಲ್ಲರ ಉಚ್ಚೆಯಿಂದ ಸಕ್ಕರೆ ತೆಗೆದು ಪೆಟ್ರೋಲ್ ತರಿಸಿಕೊಡ್ತಾರೆ ನಮ್ಮ ಮೋರಿಜೀ ಅಂತ ಪುಂಗಲಿಲ್ಲ ನಮ್ಮ #ಹೆಂಗ್_ಪುಂಗ್_ಲೀ @astitvam 🤣🤣
pic.twitter.com/JuTkYB074N— Paper Simha | ಪೇಟೆ ರೌಡಿ ಪ್ರತಾಪ (@Paper_Simha) February 2, 2021
ಸೂಲಿಬೆಲೆ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ‘ಯುವಬ್ರಿಗೇಡ್’ ‘ನಮೋ ಬ್ರಿಗೇಡ್’ ಎಂಬ ಟೀಮ್ ಮೂಲಕ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ‘ಟೀಮ್ ಮೋದಿ’ ಎಂಬ ತಂಡದ ಮೂಲಕ ಮೋದಿ ಪರವಾಗಿ ಪ್ರಚಾರ ಮಾಡಿದ್ದರು. ಚುನಾವಣಾ ಪ್ರಚಾರದ ವೇಳೆ ಮಾಡಿದ್ದ ಪೆಟ್ರೋಲ್ ಸಂಭಂದಿಸಿದ ವಿಡಿಯೋಗಳು ಈಗ ವೈರಲ್ ಆಗಿವೆ. ಅವರ ಹಿಂದಿನ ವಿಡಿಯೋಗಳಲ್ಲಿ ಹೇಳಿರುವ ಸುಳ್ಳುಗಳು, ಅತಿಶಯೋಕ್ತಿ ಮಾತುಗಳು ಟ್ರಾಲಿಗರಿಗೆ ಆಹಾರವಾಗಿದೆ.
ನೀವು ಭಯಂಕರ ಅಣ್ಣಾ, ಅಲ್ಲಾ ಇಷ್ಟು ಸುಳ್ಳು ಹೇಳಿ ಕೂಡ ಇನ್ನೂ ನಾಚಿಕೆ, ಮಾನ, ಮರ್ಯಾದಿ ಯಾವುದು ಇಲ್ಲದೇ, ಸಿಕ್ಕಿದ ಜಾಗದಲ್ಲೆಲ್ಲ ಪುಂಗಿಕೊಂಡು ಹೋಗ್ತಾ ಇದ್ದೀರಾ ಅಂದ್ರೆ ಏನು ಕಮ್ಮಿ ಸಾಧನೆ ಅಲ್ಲಾ ಬಿಡಿ !
ಅಂದಂಗೆ ಇವತ್ತು ಪೆಟ್ರೋಲ್ ರೇಟು ಎಷ್ಟಿತ್ತು ನೋಡಿದ್ರ ಅಣ್ಣಾ ?.#ಹೆಂಗ್_ಪುಂಗ್_ಲೀ pic.twitter.com/1Xn201xzTI
— ಪೊಕ್ಕಡೆ ಪೊಲೀಸ್ (@Pokkade_Police) February 3, 2021
ಅಂದು ನರೇಂದ್ರ ಮೋದಿಯನ್ನು ಹೊಗಳೋ/ವೈಭವೀಕರಿಸೋ ಭರದಲ್ಲಿ ಭಾರತ ದೇಶವನ್ನೇ ಕೀಳಾಗಿ ಬಿಂಬಿಸುತ್ತಿದ್ದ ಸೂಲಿಬೆಲೆಯ ನಿಜವಾದ ಬಣ್ಣ ಈಗ ಜನರಿಗೆ ಅರಿವಾಗುತ್ತಿದೆ. “ಮೋದಿ ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಬೆಲೆ ರೂ.20 ಮಾಡುತ್ತಾರೆ, ನರೇಂದ್ರ ಮೋದಿ ದುಬೈ ದೊರೆಗೆ ಫೋನ್ ಮಾಡಿ ಪೆಟ್ರೋಲ್ ಬೆಲೆ ಇಳಿಸುವಂತೆ ಕೇಳಿಕೊಂಡಿದ್ದಾರೆ., ಮೋದಿ ಅವ್ರು ದುಬೈಗೆ ಅಕ್ಕಿ ರಫ್ತು ಮಾಡಿ ಅದಕ್ಕೆ ಬದಲಾಗಿ ಟ್ರೋಲ್ ಪಡೆಯುತ್ತಾರೆ. ಬೆಲೆಗಳು ಇಳಿದು ಜನರ ಜೀವನ ಸುಧಾರಿಸಬೇಕು ಅಂದ್ರೆ ಮೋದಿಗೆ ವೋಟ್ ಹಾಕಿ ಎಂದು ಸೂಲಿಬೆಲೆ ತಮ್ಮ ಭಾಷಣಗಳಲ್ಲಿ ಉನ್ಮಾದದಿಂದ ಹೇಳಿದ್ದರು..
@astitvam 😂🤦🏻
ಇವತ್ತು ಬೈಕ್'ಗೆ 100 ರೂಪಾಯಿ ಕೊಟ್ಟು ಪೆಟ್ರೋಲ್ ಹಾಕಿದೆ. ನಿಮ್ಮ ನೆನಪಾಗಿ ಈ ವಿಡಿಯೋ ನೋಡಿಕೊಂಡೆ. ಅಯ್ಯೋ ನಮ್ಮ #ಹೆಂಗ್_ಪುಂಗ್_ಲೀ ಅಣ್ಣಾ ಎಷ್ಟು ಚೆನ್ನಾಗಿ ಮಾತನಾಡಿದ್ದಾರೆ ಅಲ್ವಾ, ಯಾಕೆ ಒಂದು ಟ್ವೀಟ್ ಮಾಡ್ಬಾರ್ದು ಅಂತಾ ಈ ಟ್ವೀಟ್ ಮಾಡ್ತಾ ಇದ್ದೀನಿ. pic.twitter.com/eJqFqcJxH3— ಪೊಕ್ಕಡೆ ಪೊಲೀಸ್ (@Pokkade_Police) February 1, 2021
ಅಂದು ಸೂಲಿಬೆಲೆ ಮೋದಿಯನ್ನು ಹೊಗಳಿ ಹೇಳಿದ್ದ ಮಾತುಗಳಲ್ಲಿ ಬಹುತೇಕ ಹೇಳಿಕೆಗಳು ಸುಳ್ಳು ಎಂಬುದು ಇತ್ತೀಚಿಗೆ ಬಯಲಾಗುತ್ತಿವೆ. ಈಗ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿರುವುದರಿಂದ ಸೂಲಿಬೆಲೆಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಹಳೆ ವಿಡಿಯೋಗಳನ್ನು ಹಂಚಿಕ್ಕೊಳುವುದರ ಮೂಲಕ ಪೆಟ್ರೋಲ್ ಮತ್ತು ದಿನಬಳಕೆ ವಸ್ತುಗಳ ಮೇಲಿನ ಬೆಲೆ ಏರಿಕೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವಂತೆ ಸೂಲಿಬೆಲೆಗೆ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ನಮ್ಮ ಅಣ್ಣ ಹೆಂಗ್ ಪುಂಗ್ಲಿ ಅವರು ಬೀಜೇಪಿ ಸರ್ಕಾರ ಹೇಗೆ ಪೆಟ್ರೋಲಿಯಮ್ ಉತ್ಪನ್ನಗಳ ಬಗ್ಗೆ ಟ್ಯಾಕ್ಸ್ ಹಾಕಿ,ಜನರನ್ನು ದೋಚುತ್ತೆ ಅಂತ ತಿಳಿಸಿಕೊಟ್ಟಿದ್ದಾರೆ..
ಧನ್ಯವಾದಗಳು ಸರ್..@astitvam pic.twitter.com/WvLzF7FEbE— ಕನ್ನಡಿಗ ಮಂಜುನಾಥ್ ಸಿರುಗುಪ್ಪ (@manjumedicals) February 16, 2021
ಒಟ್ಟಿನಲ್ಲಿ ತಾವು ಹೇಳಿಕೊಳ್ಳುವ ಹಾಗೆ ಸೂಲಿಬೆಲೆ ದೇಶದ ಬಗ್ಗೆ ನಿಜವಾಗಿಯೂ ಅಭಿಮಾನ, ಗೌರವ ಕಾಳಜಿ ಹೊಂದಿದ್ದರೇ ಈಗಲಾದರೂ ಜನಸಾಮಾನ್ಯರ ಮೇಲೆ ಸರ್ಕಾರ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಬೇಕು ಮತ್ತು ತಮ್ಮ ಹಳೆಯ ಸುಳ್ಳು ಭಾಷಣಗಳಿಗೆ ಸ್ಪಷ್ಟನೆ ನೀಡಬೇಕು ಎಂಬುದು ಪ್ರಜ್ಞಾವಂತ ನಾಗರೀಕರ ಆಶಯವಾಗಿದೆ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
