fbpx
ಸಮಾಚಾರ

ಕಾರಿಗೆ ಪಂಕ್ಚರ್ ಹಾಕಿದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಂಡು ಜನರಿಗೆ ಅಚ್ಚರಿ: ವಿಡಿಯೋ ವೈರಲ್

ಸರಳ ವ್ಯಕ್ತಿತ್ವದ ಮೂಲಕ ಹಲವರ ಮೆಚ್ಚುಗೆ ಪಡೆದಿರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಇದೀಗ ಮತ್ತೊಮ್ಮೆ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ತಮ್ಮ ಕಾರಿನ ಟೈರ್ ತಾವೇ ಬದಲಾಯಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಡಿಸಿ ರೋಹಿಣಿ ಸಿಂಧೂರಿ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಹೌದು, ರೋಹಿಣಿ ಸಿಂಧೂರಿ ಅವರು ಕುಟುಂಬದ ಜೊತೆ ಹೊರ ಹೋಗಿದ್ದ‌ ಸಂದರ್ಭದಲ್ಲಿ ತಾವೇ ಕಾರಿನ ಟೈರ್ ಕಳಚಿ, ಬದಲಾಯಿಸಿದ್ದಾರೆ. ಇದನ್ನು ಗಮನಿಸಿದ ಜನರು ನೀವು ರೋಹಿಣಿ ಸಿಂಧೂರಿ ಅವರಲ್ಲವೇ?, ನೀವೇ ಟೈರ್ ಬದಲಾವಣೆ ಮಾಡುತ್ತೀರಾ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ರೋಹಿಣಿ‌ಯವರು ನಕ್ಕು ಸುಮ್ಮನಾಗಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ‌ಯವರ ಸಾಹಸದ ವಿಡಿಯೋವನ್ನು ಸಾರ್ವಜನಿಕರು ಚಿತ್ರಿಸಿದ್ದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಫುಲ್ ವೈರಲ್ ಆಗಿದೆ. ಮೈಸೂರು ಡಿಸಿಯ ಸರಳತೆ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top