fbpx
ಸಮಾಚಾರ

ನರೇಂದ್ರ ಮೋದಿ ಸ್ಟೇಡಿಯಂನ ಬೌಲಿಂಗ್‌ ಎಂಡ್‌ಗೆ ಅದಾನಿ, ರಿಯಲನ್ಸ್‌ ಹೆಸರಿಟ್ಟಿದ್ದೇಕೆ ಗೊತ್ತಾ? ಇಲ್ಲಿದೆ ಉತ್ತರ

ಪ್ರಪಂಚದ ಅತಿ ದೊಡ್ಡ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೊಟೇರಾ ಸರ್ದಾರ್ ಪಟೇಲ್ ಸ್ಟೇಡಿಯಂಗೆ ‘ನರೇಂದ್ರ ಮೋದಿ ಕ್ರೀಡಾಂಗಣ’ ಎಂದು ಮರು ನಾಮಕರಣ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಸೃಷ್ಟಿಸಿದ್ದು ಸಾಕಷ್ಟು ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನ ಜೊತೆಗೆ ಸ್ಟ್ಯಾಂಡ್‌ಗಳಿಗೆ ಇಟ್ಟಿರುವ ಹೆಸರು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಅದಾನಿ ಪ್ರೀಮಿಯಮ್ ಸೆಂಟರ್, ಅದಾನಿ ಪ್ರೀಮಿಯಮ್ ವೆಸ್ಟ್ ಹಾಗೂ ಅದಾನಿ ಪ್ರೀಮಿಯಮ್ ಈಸ್ಟ್ ಮತ್ತು ರಿಲಯನ್ಸ್ E, ರಿಲಯನ್ಸ್ N ಎಂಬ ಸ್ಟಾಂಡ್‌ಗಳನ್ನು ಹೊಂದಿದೆ. ಹೀಗಾಗಿ ಕ್ರೋಡಾಂಗಣದ ಎರಡು ತುದಿಗಳನ್ನು ‘ಅದಾನಿ ಎಂಡ್’ ಹಾಗೂ ‘ರಿಲಯನ್ಸ್ ಎಂಡ್’ ಎಂದು ಗುರುತಿಸಲಾಗುತ್ತಿದೆ.

ಭಾರತದ ಇಬ್ಬರು ಖ್ಯಾತ ಉದ್ಯಮ ಸಂಸ್ಥೆಗಳಾದ ರಿಲಯನ್ಸ್ ಹಾಗೂ ಅದಾನಿ ಪ್ರದಾನಿ ನರೇಂದ್ರ ಮೋದಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾರಣ ರಾಜಕೀಯವಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿತ್ತು. ಆದರೆ ಇದರ ಹಿಂದಿರುವ ಗುಟ್ಟು ಬಯಲಾಗಿದೆ.

ಅದಾನಿ ಹಾಗೂ ರಿಲಯನ್ಸ್‌ ಎರಡೂ ಸಂಸ್ಥೆಗಳು ಕ್ರೀಡಾಂಗಣದಲ್ಲಿ ತಲಾ ಒಂದು ಕಾರ್ಪೋರೇಟ್‌ ಬಾಕ್ಸ್‌ಗಳನ್ನು 25 ವರ್ಷಕ್ಕೆ 250 ಕೋಟಿಗೆ ಖರೀದಿಸಿದ್ದು, ಇದರ ಒಪ್ಪಂದದ ಭಾಗವಾಗಿ ಬೌಲಿಂಗ್‌ ಎಂಡ್‌ಗಳಿಗೆ ಸಂಸ್ಥೆಗಳ ಹೆಸರಿಡಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top