fbpx
ಸಮಾಚಾರ

ವಿಶ್ವದ ಅತೀ ದೊಡ್ಡ ಕ್ರಿಕೆಟ್​ ಮೈದಾನದ ಪಿಚ್ ಬಗ್ಗೆ ಯುವರಾಜ್ ಸಿಂಗ್ ಆಕ್ರೋಶ

ಇಂಗ್ಲೆಂಡ್–ಭಾರತ ತಂಡಗಳ ನಡುವಣ ಟೆಸ್ಟ್ ಪಂದ್ಯ ಎರಡೇ ದಿನಗಳಲ್ಲಿ ಫಲಿತಾಂಶ ಕಂಡಿರುವುದಕ್ಕೆ ಕೆಲವು ಹಿರಿಯ ಆಟಗಾರರಿಂದ ಪಿಚ್ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ. ಎರಡೇ ದಿನಗಳಲ್ಲಿ ಫಲಿತಾಂಶ ಟೆಸ್ಟ್ ಕ್ರಿಕೆಟ್‌ಗೆ ಉತ್ತಮವಲ್ಲ ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

 

 

ಪಂದ್ಯದ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಎರಡೇ ದಿನಗಳಲ್ಲಿ ಫಲಿತಾಂಶ ಬಂದಿರುವುದು ಟೆಸ್ಟ್ ಕ್ರಿಕೆಟ್‌ನ ದೃಷ್ಟಿಯಿಂದ ಒಳ್ಳೆಯದಲ್ಲ. ಇಂಥ ಪಿಚ್‌ನಲ್ಲಿ ಅನಿಲ್ ಕುಂಬ್ಳೆ ಅಥವಾ ಹರಭಜನ್ ಸಿಂಗ್ ಬೌಲಿಂಗ್ ಮಾಡಿದ್ದಿದ್ದರೆ ಅವರ ವಿಕೆಟ್ ಗಳಿಗೆ ಈಗ 1000 ಹಾಗೂ 800 ಆಗಿರುತ್ತಿತ್ತು ಎಂದು ಯೋಚಿಸುತ್ತಿದ್ದೇನೆ. ಆದಾಗ್ಯೂ ಉತ್ತಮ ಬೌಲಿಂಗ್ ಮಾಡಿದ ಅಕ್ಷರ್ ಪಟೇಲ್, ಅಶ್ವಿನ್ ಹಾಗೂ ಇಶಾಂತ್‌ಗೆ ಅಭಿನಂದನೆಗಳು’ ಎಂದು ಉಲ್ಲೇಖಿಸಿದ್ದಾರೆ.

ಅಂದಹಾಗೆ ಬುಧವಾರ ಆರಂಭವಾದ ಹಗಲು-ರಾತ್ರಿ ಪಂದ್ಯದಲ್ಲಿ ಉಭಯ ತಂಡಗಳು 150ಕ್ಕೂ ಅಧಿಕ ರನ್ ಗಳಿಸಲು ವಿಫಲವಾಗಿದ್ದವು. ಇಂಗ್ಲೆಂಡ್ ಮೊದಲ ಹಾಗೂ ಎರಡನೇ ಇನಿಂಗ್ಸ್ ನಲ್ಲಿ ಕ್ರಮವಾಗಿ 112 ಹಾಗೂ 81 ರನ್ ಗಳಿಸಿ ಆಲೌಟಾಗಿದೆ. ಭಾರತ ಮೊದಲ ಇನಿಂಗ್ಸ್ ನಲ್ಲಿ 145 ರನ್ ಗಳಿಸಿ ಆಲೌಟಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top