fbpx
ಸಮಾಚಾರ

‘ಶಾಸ್ತ್ರಿ’ ಸಿನಿಮಾ ನಾಯಕಿ ಮಾನ್ಯಾಗೆ ಸ್ಟ್ರೋಕ್ (ಪಾರ್ಶ್ವವಾಯು): ಹಾಸಿಗೆ ಹಿಡಿದ ನಟಿ

ಶಾಸ್ತ್ರೀ ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದ ನಟಿ ಮಾನ್ಯಾ ಪಾರ್ಶ್ವವಾಯು ಸಮಸ್ಯೆಗೆ ತುತ್ತಾಗಿದ್ದಾರೆ. ತಮಗೆ ಎದುರಾಗಿರುವ ಕಷ್ಟದ ಬಗ್ಗೆ ತಮ್ಮ ಅಧಿಕೃತ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮಾನ್ಯಾ, ತಮ್ಮ ಫೋಟೋವನ್ನೂ ಹಂಚಿಕೊಂಡಿದ್ದಾರೆ.

 

 

ಇದ್ದಕ್ಕಿದ್ದಂತೆ ಕಾಲು ನೋವು ಕಾಣಿಸಿಕೊಂಡು ತಾವು ಅನುಭವಿಸಿದ ಕಷ್ಟ, ಕೊವಿಡ್​ ಭಯದ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೀತಿ, ವೈದ್ಯರು ನೀಡಿದ ಭರವಸೆ, ಸದ್ಯ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಹೇಳಿಕೊಂಡಿರುವ ಮಾನ್ಯಾರ ಪೋಸ್ಟ್​ಗೆ ಅನೇಕರು ಪ್ರತಿಕ್ರಿಯಿಸಿ ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದಾರೆ.

“ಪಾರ್ಶ್ವವಾಯು ಕಾರಣದಿಂದ ಕಳೆದ ಮೂರು ವಾರಗಳಿಂದ ನನಗೆ ಕುಳಿತುಕೊಳ್ಳಲು ಆಗುತ್ತಿಲ್ಲ ಅಲ್ಲದೆ ನಡೆಯಲು, ನಿಲ್ಲಲು, ಮಲಗಲೂ ತೊಂದರೆಯಾಗುತ್ತಿದೆ. ಆದರೆ ನಾನು ನಿಧಾನವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಿಧಾನವಾಗಿ ಗುಣಮುಖವಾಗುವ ಭರವಸೆಯನ್ನು ವೈದ್ಯರು ನೀಡಿದ್ದಾರೆ.” ಮಾನ್ಯಾ ಹೇಳಿದ್ದಾರೆ.

‘ನಾನು ಜೀವನದಲ್ಲಿ ರಿಯಲ್ ಆಗಿರಲು ಬಯಸುತ್ತೇನೆ. ಸೋಷಿಯಲ್ ಮೀಡಿಯಾದಲ್ಲಿ ಒಂದು ರೀತಿ, ನಿಜ ಜೀವನದಲ್ಲಿ ಒಂದು ರೀತಿ ಅಲ್ಲ. ನನ್ನ ಯಶಸ್ಸು ಹಾಗೂ ಟ್ರಿಪ್‌ಗಳ ಫೋಟೋ ಶೇರ್ ಮಾಡಿಕೊಳ್ಳುವಂತೆ, ನನ್ನ ಕಷ್ಟಗಳನ್ನೂ ಹಂಚಿಕೊಳ್ಳುತ್ತೇನೆ. ನಾನು ನಿಮ್ಮಂತೆ ಸಾಧಾರಣ ಹೆಣ್ಣು ಎಂಬ ಕಾರಣಕ್ಕೆ ಹಂಚಿ ಕೊಳ್ಳುವೆ. ಪ್ರತಿ ಕ್ಷಣ ನಾನು ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತೇವೆ, ಎಂಬ ಛಲದಿಂದ ಹೋರಾಡಬೇಕು,’ ಎಂದು ಮಾನ್ಯಾ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top