fbpx
ಸಮಾಚಾರ

ಖ್ಯಾತ ಅಥ್ಲೆಟಿಕ್ ಸ್ಟಾರ್ ಹಿಮಾ ದಾಸ್ ಪೊಲೀಸ್ DSP ಆಗಿ ನೇಮಕ

ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಶುಕ್ರವಾರ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಸಮ್ಮುಖದಲ್ಲಿ ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಆಗಿ ಸೇರ್ಪಡೆಗೊಂಡರು. ಸೋನೊವಾಲ್ ಅವರು ಹಿಮಾ ದಾಸ್‌ಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.

ಮಾಜಿ ಕೇಂದ್ರ ಕ್ರೀಡಾ ಸಚಿವರಾದ ಸೋನೊವಾಲ್ ಅವರು ರಾಜ್ಯ ಸರ್ಕಾರದ ಉನ್ನತ ಕಾರ್ಯಕರ್ತರು ಮತ್ತು ಪೊಲೀಸ್ ಇಲಾಖೆ ಪರ ಪೊಲೀಸ್ ಮಹಾನಿರ್ದೇಶಕರು ಭಾಗವಹಿಸಿದ ಸಮಾರಂಭದಲ್ಲಿ ಹಿಮಾ ಅವರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.

ಡಿಎಸ್ಪಿ ಆಗಿ ಸೇರ್ಪಡೆಗೊಂಡ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ 21 ವರ್ಷದ ಹಿಮಾ, ತಾನು ಚಿಕ್ಕವಳಿದ್ದಾಗ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದಾಗಿ ಹೇಳಿಕೊಂಡರು.”ಇಲ್ಲಿನ ಜನರಿಗೆ ನನ್ನ ಬಗ್ಗೆ ತಿಳಿದಿದೆ, ನಾನಿನ್ನೇನೂ ಹೇಳಲು ಹೋಗುವುದಿಲ್ಲ.ನನ್ನ ಆರಂಭಿಕ ಶಾಲಾ ದಿನಗಳಿಂದಲೂ, ನಾನು ಒಂದು ದಿನ ಪೊಲೀಸ್ ಅಧಿಕಾರಿಯಾಗಬೇಕೆಂಬ ಬಯಕೆಯನ್ನು ಹೊಂದಿದ್ದೆ ಮತ್ತು ನನ್ನ ತಾಯಿಯೂ ಅದನ್ನು ಬಯಸಿದರು. ನಾನು ದುರ್ಗಾಪೂಜೆಯ ಸಮಯದಲ್ಲಿ ಆಟಿಕೆಯ ಬಂದೂಕು ಖರೀದಿಸುತ್ತಿದ್ದೆ, ನನ್ನ ತಾಯಿ ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸಮಾಜಕ್ಕೆ ಒಳ್ಳೆ ಕೆಲಸ ಮಾಡುವಂತೆ ಹೇಳುತ್ತಿದ್ದರು.” ಹಿಮಾ ದಾಸ್ ತಮ್ಮ ಬಾಲ್ಯದ ದಿನಗಳನ್ನು ನೆನೆದರು.

ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಹಾಗೂ ಜೂನಿಯರ್ ವಿಶ್ವ ಚಾಂಪಿಯನ್ ಆಗಿರುವ ಹಿಮಾ ‘ದಿಂಗ್ ಎಕ್ಸ್‌ಪ್ರೆಸ್’ ಎಂದೇ ಖ್ಯಾತಿ ಪಡೆದಿದ್ದರು. ಫೆಬ್ರವರಿ 11ರಂದು ಪೊಲೀಸ್ ಅಧಿಕಾರಿ ಹುದ್ದೆಗೆ ನೇಮಕವಾಗಿದ್ದರು. 2018ರ ವಿಶ್ವ ಜೂನಿಯರ್ ಚಾಂಪಿಯನ್ ಎನ್‌ಐಎಸ್-ಪಾಟಿಯಾಲದಲ್ಲಿ ತರಬೇತಿ ಪಡೆದಿದ್ದರು. ಮುಂಬರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವ ಗುರಿ ಹಾಕಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top