fbpx
ಸಮಾಚಾರ

ಕನ್ನಡಿಗ ಕ್ಯಾಪ್ಟನ್‌ ಗೋಪಿನಾಥ್‌ ಕುರಿತ ಸೂರರೈ ಪೊಟ್ರು ಚಿತ್ರ ಆಸ್ಕರ್ ಅರ್ಹತಾ ಹಂತಕ್ಕೆ ಆಯ್ಕೆ

ತಮಿಳಿನ ಸ್ಟಾರ್ ನಟ ಸೂರ್ಯ ಅಭಿನಯದ ‘ಸೂರರೈ ಪೋಟ್ರು’ ಸಿನಿಮಾವು ಆಸ್ಕರ್ ನಾಮಿನೇಶನ್‌ಗೆ ಆಯ್ಕೆಯಾಗಿತ್ತು. ಇದೀಗ 366 ಸಿನಿಮಾಗಳ ಪೈಕಿ ‘ಸೂರರೈ ಪೊಟ್ರು’ ಕೂಡ ಅರ್ಹತಾ ಹಂತಕ್ಕೆ ಆಯ್ಕೆಯಾಗಿದೆ. ಈ ಬಗ್ಗೆ ಸಿನಿಮಾದ ನಿರ್ದೇಶಕ ರಾಜ್‌ಸೇಕರ್ ಪಾಂಡಿಯನ್ ಟ್ವೀಟ್ ಮಾಡಿದ್ದಾರೆ.

ಕಡಿಮೆ ದರದಲ್ಲಿ ಸಾಮಾನ್ಯ ವ್ಯಕ್ತಿಗಳೂ ವಿಮಾನದಲ್ಲಿ ಸಂಚರಿಸಬೇಕು ಎಂದು ಕನಸು ಹೊತ್ತು ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆ ಆರಂಭಿಸಿದ ಕನ್ನಡಿಗ ಗೋಪಿನಾಥ್​ ಜೀವನದ ಕಥೆ ಸೂರರೈ ಪೊಟ್ರು ಸಿನಿಮಾ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಹಿನ್ನೆಲೆ ಸಂಗೀತ ಹಾಗೂ ಇತರ ವಿಭಾಗಗಳಲ್ಲಿ ಆಸ್ಕರ್​ ಸ್ಪರ್ಧೆಗೆ ಪ್ರವೇಶಿಸಿದೆ.

2020ರಲ್ಲಿ ಎದುರಾದ ಕೊರೊನಾ ವೈರಸ್‌ ಹಾವಳಿಯ ಕಾರಣಕ್ಕೆ ಆಸ್ಕರ್‌ ಆಯೋಜಕರು ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾಗಳು ಕೂಡ ಆಸ್ಕರ್‌ ಪ್ರಶಸ್ತಿಗೆ ಸ್ಪರ್ಧಿಸಬಹುದು ಎನ್ನಲಾಗಿದೆ. ಪ್ರಾಥಮಿಕ ಹಂತದಲ್ಲಿ ಆಯ್ಕೆಯಾದ 366 ಸಿನಿಮಾಗಳ ಪಟ್ಟಿಯಲ್ಲಿ ಸೂರರೈ ಪೊಟ್ರು ಸಿನಿಮಾ ಇದೆ. ಜನರಲ್ ಕೆಟಗರಿಯಲ್ಲಿ ಈ ಸಿನಿಮಾ ಸ್ಪರ್ಧಿಸುತ್ತಿದೆ ಎಂದು ಸಹ ನಿರ್ಮಾಪಕ ರಾಜಶೇಖರ್ ಪಾಂಡ್ಯ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top