fbpx
ಸಮಾಚಾರ

ಪೊರಕೆಯಲ್ಲಿ ಏಟು ತಿನ್ನೋದು ಅಭ್ಯಾಸ ಆಗಿತ್ತು: ಅಗ್ನಿಸಾಕ್ಷಿ ಸನ್ನಿದಿ ಬಿಚ್ಚಿಟ್ಟ ಇಂಟೆರೆಸ್ಟಿಂಗ್ ವಿಚಾರ

ಬಿಗ್ ಬಾಸ್ ಸೀಸನ್ 8ಕ್ಕೆ ನಿನ್ನೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಒಟ್ಟು ಹದಿನೇಳು ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ತಗೊಂಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ ಒಂಟಿ ಮನೆ ಪ್ರವೇಶಕ್ಕೂ ಮುನ್ನ ಖಾಸಗಿ ಬದುಕಿನ ಹಲವು ವಿಚಾರಗಳನ್ನ ನಟ, ನಿರೂಪಕ ಸುದೀಪ್ ಜೊತೆ ಹಂಚಿಕೊಂಡಿದ್ದಾರೆ. ಬಾಲ್ಯದಲ್ಲಿ ಅಮ್ಮನ ಪೊರಕೆ ಏಟಿನ ಬಗ್ಗೆ ಹೇಳಿದ್ದಾರೆ.

ವೈಷ್ಣವಿಗೆ ಪೊರಕೇಲಿ ಹೊಡಿಯೋದು ಬೇರೆ ಯಾರೂ ಅಲ್ಲ. ಅವರ ಸ್ವಂತ ಅಮ್ಮನೇ. ಅರೆರೇ, ಅಮ್ಮ ಮಕ್ಕಳಿಗೆ ಪೊರಕೇಲಿ ಹೊಡೀತಾರಾ ಅಂತ ಕೇಳೋ ಹಾಗಿಲ್ಲ. ಯಾಕೆಂದರೆ ಅದನ್ನು ವೈಷ್ಣವಿ ಬಹಳ ಇಷ್ಟಪಡುತ್ತಾರಂತೆ. ಒಂದಿಷ್ಟು ದಿನ ಅಮ್ಮ ಪೊರಕೇಲಿ ಹೊಡೀದಿದ್ರೆ ಅವರಿಗೆ ಏನೋ ಕಳ್ಕೊಂಡ ಫೀಲ್ ಆಗುತ್ತಂತೆ. ಅರೆರೇ, ಅಮ್ಮಂಗೇನಾದ್ರೂ ಬೇಜಾರಾಗಿರಬಹುದಾ, ಯಾಕೆ ಹೊಡೀತಾನೇ ಇಲ್ಲ.. ಅಂತ ಅವರು ಯೋಚಿಸ್ತಾರಂತೆ. ಚಿಕ್ಕ ವಯಸ್ಸಿಂದಲೂ ಅಮ್ಮನ ಕೈಯಲ್ಲಿ ಪೊರಕೆ ಏಟು ತಿಂದೇ ಅಭ್ಯಾಸ ಇವರಿಗೆ.

ಈ ವೇಳೆ ವೈಷ್ಣವಿ ತಾಯಿ ಮಾತನಾಡಿ, ಕೋಪದಲ್ಲಿ ಕೈಯಲ್ಲಿ ಏನು ಸಿಗುತ್ತೆ ಅದರಲ್ಲಿ ಹೊಡೆಯುತ್ತೇನೆ. ಮಕ್ಕಳ ಒಳ್ಳೆಯದಕ್ಕಾಗಿ ಹೊಡೆಯುತ್ತಿದ್ದೆ ಅಂತ ಅಂದ್ರು. ಮನೆಯಲ್ಲಿ ಪೊರಕೆ, ದೋಸೆ ಸ್ಟಿಕ್, ಕೋಲು ಹೀಗೆ ಎಲ್ಲ ಅಮ್ಮನ ಆಯುಧಗಳು. ಕೆಲವೊಮ್ಮೆ ಅಮ್ಮ ಹೊಡೆಯಲಿಲ್ಲ ಅಂದ್ರೆ ನಾನು ಸರಿ ಮಾಡ್ತೀದ್ದೀನಿ ಅಂತ ಅನ್ನಿಸುತ್ತಿತ್ತು. ಯಾವಗಲೂ ಪೊರಕೆಯಲ್ಲಿ ಹೊಡೆಯುತ್ತಿದ್ದರಿಂದ ನನಗೂ ರೂಢಿ ಆಗಿತ್ತು. ಒಂದು ತರ ಪೊರಕೆಯಲ್ಲಿ ಹೊಡೆಸಿಕೊಳ್ಳೋಕೆ ಬೇಜಾರು ಆಗ್ತಿರಲಿಲ್ಲ ಅಂತ ಹೇಳಿ ವೈಷ್ಣವಿ ನಕ್ಕರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top