fbpx
ಸಮಾಚಾರ

“ಬಿಗ್‌ಬಾಸ್‌ಗೆ ಹೋಗುವುದಕ್ಕೆ ಆಸೆ, ವಿಶೇಷ ಆಹ್ವಾನಿತನಾಗಿ ಕರೆದರೆ ಹೋಗುವೆ” ಹೆಚ್.ವಿಶ್ವನಾಥ್

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ಕ್ಕೆ ನಿನ್ನೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಒಟ್ಟು ಹದಿನೇಳು ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಈ ಮದ್ಯೆ ಬೆಂಗಳೂರಿನಲ್ಲಿ ಮಾಜಿ ಸಚಿವ ಎಚ್ ವಿಶ್ವನಾಥ್ ತಮಗೆ ಬಿಗ್ ಬಾಸ್‌ ಮನೆ ಪ್ರವೇಶಿಸಲು ಅವಕಾಶ ಬಂದಿರುವುದರ ಬಗ್ಗೆ ಖಚಿತ ಪಡಿಸಿದ್ದಾರೆ.

‘ಈ ಹಿಂದಿಯೇ ನನಗೆ ಕರೆ ಬಂದಿತ್ತು. 6ನೇ ಸೀಸನ್‌ಗೆ ಆಹ್ವಾನಿಸಿದ್ದರು. ಆದರೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಹೋಗಿರಲಿಲ್ಲ. ಈಗ ವಿಶೇಷ ಆಹ್ವಾನಿತನಾಗಿ ಹೋಗಲು ಅವಕಾಶ ಸಿಕ್ಕರೆ ಹೋಗುತ್ತೇನೆ. ಸಮಯ ಹಾಗೂ ಅವಕಾಶ ಸಿಕ್ಕರೆ ನಾಲ್ಕೈದು ದಿನ ಹೋಗಲು ರೆಡಿಯಾಗಿರುವೆ. ನಾವು ರಾಜಕಾರಣದ ಬಗ್ಗೆ ಜನ ಶಿಕ್ಷಣ ಕೊಡಬೇಕಿದೆ. ಅದಕ್ಕೊಂದು ಅವಕಾಶ ಸಿಗಲಿದೆಯಾ ಅಂತ ಕಾಯ್ತಾ ಇದ್ದೇನೆ,’ ಎಂದು ವಿಶ್ವನಾಥ್ ಮಾತನಾಡಿದ್ದಾರೆ.

ಚುನಾವಣೆಗಳು ಬಂದಿವೆ, ಅಲ್ಲಿ ಇಲ್ಲಿ ಜವಾಬ್ದಾರಿ ಹಾಕ್ತಾರೆ, ಹಾಗಾಗಿ ಹೋಗಲು ಸ್ವಲ್ಪ ಕಷ್ಟ ಆಗಬಹುದು. ಅವರು ವಿಶೇಷ ಆಹ್ವಾನಿತರಾಗಿ ಬನ್ನಿ ಅಂತಾ ಕರೆದರೆ ಮೂರ್ನಾಲ್ಕು ದಿನಕ್ಕೆ ಹೋಗಬಹುದು. ದೇಶದಲ್ಲಿ ಜನರಿಗೆ ಎಲ್ಲಾ ಅರ್ಥ ಆಗುತ್ತಿದ್ದರೂ ಜನರಿಗೆ ರಾಜಕಾರಣ ಅರ್ಥ ಆಗುತ್ತಿಲ್ಲ. ಆ ಮನೆಯಲ್ಲಿ ಯುವಕರು, ಸಿನಿಮಾದವರು, ಗಂಡು ಮಕ್ಕಳು, ಹೆಣ್ಣು ಮಕ್ಕಳು, ಸಿನಿಮಾದವರು ಇದ್ದಾರೆ. ಅಲ್ಲಿ ನಾನು ರಾಜಕಾರಣದ ಸ್ಪಾರ್ಕ್ ಹಚ್ಚಬಹುದು. ಅವಕಾಶ ಸಿಕ್ಕಿದರೆ ಖಂಡಿತ ಬಿಗ್ ಬಾಸ್ ಮನೆಗೆ ಹೋಗುತ್ತೇನೆ ಎಂದು ಹೆಚ್​.ವಿಶ್ವನಾಥ್ ಹೇಳಿದ್ರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top