fbpx
ಸಮಾಚಾರ

ಬಿಗ್‌ಬಾಸ್ ಸೀಸನ್ 08: ಮನೆಯಿಂದ ಹೊರ ಹೋಗಲು ಮೊದಲ ವಾರವೇ 5 ಮಂದಿ ನಾಮಿನೇಟ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 8 ಪ್ರಾರಂಭವಾಗಿದ್ದು ಆರಂಭದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ವಿವಿಧ ಕ್ಷೇತ್ರಗಳಿಂದ ಒಟ್ಟು 17 ಜನ ಸೆಲೆಬ್ರೆಟಿಗಳು ಸ್ಪರ್ದಿಗಳಾಗಿ ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ.. ಕಾರ್ಯಕ್ರಮದ ಮೊದಲ ದಿನವೇ ಸ್ಪರ್ಧಿಗಳಿಗೆ ನಾಮಿನೇಷನ್ ಮೂಲಕ ಬಿಗ್ ಬಾಸ್ ಶಾಕ್ ನೀಡಿದ್ದಾರೆ..

ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗಡೆ ಹೋಗಲು ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯ ಬರೋಬ್ಬರಿ 5 ಜನ ಸ್ಪರ್ದಿಗಳು ನಾಮಿನೇಟ್ ಆಗಿದ್ದಾರೆ.. ನಿಧಿ ಸುಬ್ಬಯ್ಯ, ಪಾವಗಡ ಮಂಜು, ಪ್ರಶಾಂತ್ ಸಂಬರ್ಗಿ, ಟಿಕ್‌ಟಾಕ್ ಸ್ಟಾರ್ ಧನುಶ್ರಿ, ನಿರ್ಮಲಾ ನಾಮಿನೇಟ್ ಆದರು. ಇದರ ಜೊತೆಗೆ ಸ್ಪರ್ಧಿ ನಿರ್ಮಲಾ ಅವರು ಆಟದಲ್ಲಿ ಸೋತ ಕಾರಣ ಮನೆಯಿಂದ ಹೊರಗೆ ಹೋಗಲು ನೇರವಾಗಿ ನಾಮಿನೇಟ್ ಆದರು. ಅಲ್ಲಿಗೆ ಒಟ್ಟು ಆರು ಮಂದಿ ಸ್ಪರ್ಧಿಗಳು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದಾರೆ.

ಅಂದಹಾಗೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬೇರೆ ಬೇರೆ ಕಾರಣಕ್ಕೆ ದಿವ್ಯಾ ಉರುಡುಗ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ರಾಜೀವ್, ಕೆಪಿ ಅರವಿಂದ್, ಚಂದ್ರಕಲಾ ಮೋಹನ್, ಧನುಶ್ರೀ, ಪ್ರಶಾಂತ್ ಸಂಬರಗಿ ಅವರ ಹೆಸರುಗಳನ್ನ ಹೆಸರಿಸಿದರು. ಇದರಲ್ಲಿ ಅತಿ ಹೆಚ್ಚು ಮತ ಪಡೆದ ನಿಧಿ, ಮಂಜು, ಧನಶ್ರೀ, ಪ್ರಶಾಂತ್ ಎಲಿಮಿನೇಟ್ ಆಗಲು ನಾಮಿನೇಟ್ ಆದರು. ಇನ್ನು ಕ್ಯಾಪ್ಟನ್ ಆದ ಬ್ರೊ ಗೌಡ ಅವರಿಗೆ ಒಬ್ಬರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಆಗ ಅವರು ಶಂಕರ್ ಅಶ್ವತ್ಥ್‌ರನ್ನು ಉಳಿಸಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top