fbpx
ಸಮಾಚಾರ

ಸಣ್ಣ ಚಿಲ್ಲರೆ ಗಲಾಟೆಯಿಂದ ಹಲ್ಲೆ, ಕೊಲೆಯವರೆಗೂ ಹೋಗುತ್ತಾರೆ: ಜಗ್ಗೇಶ್ ಹೇಳಿದ್ದು ಯಾರಿಗೆ?

ಇತ್ತೀಚೆಗೆ ದರ್ಶನ್ ಅಭಿಮಾನಿಗಳು ಹಾಗೂ ಸ್ಯಾಂಡಲ್ ವುಡ್ ನ ನವರಸನಾಯಕ ಜಗ್ಗೇಶ್ ಅವರ ಮಧ್ಯೆ ಸಣ್ಣ ಮನಸ್ತಾಪ ನಡೆದಿದ್ದು, ಎಲ್ಲವೂ ಬಗೆಹರಿದಿದೆ. ಈ ಬೆನ್ನಲ್ಲೇ ಇದೀಗ ಜಗ್ಗೇಶ್ ಅವರು ವಿಮರ್ಶಾತ್ಮಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದು ಹರಿಬಿಟ್ಟಿದ್ದಾರೆ.

 

 

ಜಗ್ಗೇಶ್ ಅವರ ಪೋಸ್ಟ್ ಈ ರೀತಿ ಇದೆ:
ವಿಶ್ವ ಎಂಬ ಚಲಿಸುವ ಗಾಡಿಯಲ್ಲಿ ಮನುಕುಲದ ಸಮಸ್ತರು ಪ್ರಯಾಣಿಕರು. ಈ ಪ್ರಯಾಣದಲ್ಲಿ ಯಾರು ಸ್ನೇಹಿತರಲ್ಲ! ಯಾರು ಶತ್ರುಗಳು ಅಲ್ಲ, ಕೆಲವರು ನಗುತ್ತ ಮಾತಾಡಿಸುತ್ತಾರೆ. ಕೆಲವರು ನೋಡಿಯು ನೋಡದಂತೆ ಅವರ ಬಗ್ಗೆ ಮಾತ್ರ ಚಿಂತಿಸಿ ಅನ್ಯರ ತಳ್ಳಿ ಜಾಗಹಿಡಿದು ಕೂರುತ್ತಾರೆ. ಕೆಲವರು ತಮ್ಮ ಸಂತೋಷಕ್ಕಾಗಿ ಜೋರಾಗಿ ಕೂಗಾಡುತ್ತಾ ಆನಂದಿಸಿ ಅನ್ಯರಿಗೆ ನೋವುಂಟು ಮಾಡುತ್ತಾರೆ. ಕೆಲವರು ತಮ್ಮ ಸಂತೋಷ ನೆಮ್ಮದಿಗಾಗಿ ಅನ್ಯರ ಬೈಯುತ್ತ ಗೆದ್ದಂತೆ ಬೀಗಿ ಪ್ರಯಾಣಿಸುತ್ತಾರೆ.

ಕೆಲವರು ಗುರು ಹಿರಿಯರ ಕಂಡಕ್ಷಣ ಅವರ ಆಸನ ಹಿರಿಯರಿಗೆ ಬಿಟ್ಟುಕೊಟ್ಟು ಸಾರ್ಥಕ ಭಾವದಿಂದ ಪ್ರಯಾಣ ಆನಂದಿಸುತ್ತಾರೆ. ಕೆಲವರು ಪ್ರಯಾಣದಲ್ಲಿ ಸಣ್ಣ ಚಿಲ್ಲರೆ ಗಲಾಟಿಯಿಂದ ಹಲ್ಲೆ ಕೊಲೆಯವರೆಗು ಹೋಗಿ ಸಾಮರಸ್ಯ ಹಾಳು ಮಾಡಿ ಅವರು ಹಾಳಾಗುತ್ತಾರೆ. ಅದರಲ್ಲಿ ಕೆಲವರು ಮಾತ್ರ ಈ ಪ್ರಯಾಣ ಜಂಜಾಟ ಗಮನಿಸದೆ ತಮ್ಮಲ್ಲೆ ತಾವು ಲೀನವಾಗಿ ಕೆಸರಂತ ಈ ಪ್ರಯಾಣದಲ್ಲಿ ಅದಕ್ಕಂಟದೆ ತಾವರೆ ಹೂವಿನಂತೆ ಮೇಲೆಬಂದು ಪ್ರಯಾಣ ಆನಂದವಾಗಿ ಮುಗಿಸಿದ ಮೇಲೆಯು ಮನಸಲ್ಲಿ ಉಳಿಯುತ್ತಾರೆ.

ಇದ ಹೇಳಲು ಕಾರಣ ಈ ಬದುಕಿನ ಪ್ರಯಾಣದ ಪ್ರಕ್ರಿಯೆ ಕೂಡಿಕಳೆದಾಗ ಉಳಿವುದು ಒಂದೆ “ಸತ್ ಚಿತ್ ಆನಂದ “ಸಚ್ಚಿದಾನಂದ ರೂಪ. ಅದು ಶಿವನ ಆನಂದ ಸ್ಥಿತಿ. ಇದ ಅರಿತು ಜೀವನ ಪ್ರಯಾಣ ಮಾಡಿದವ ಮಾತ್ರ ಉತ್ತಮ ಪ್ರಯಾಣಿಕ. ಇದರಲ್ಲಿ ನೀವು ಯಾವ ರೀತಿ ಪ್ರಯಾಣಿಕರು ಚಿಂತಿಸಿ ಬದುಕಿನ ಪ್ರಯಾಣಮಾಡಿ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top