fbpx
ಸಮಾಚಾರ

ಮಾರ್ಚ್ 03: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಮಾರ್ಚ್ 3, 2021 ಬುಧವಾರ
ವರ್ಷ : 1942 ಶಾರ್ವರಿ
ತಿಂಗಳು : ಮಾಘ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಪಂಚಮೀ 12:21 am
ನಕ್ಷತ್ರ : ಸ್ವಾತಿ 1:35 am
ಯೋಗ : ಧ್ರುವ 2:40 am
ಕರಣ : ಕುಲವ 1:38 pm ತೈತುಲ 12:21 am

Time to be Avoided
ರಾಹುಕಾಲ : 12:31 pm – 2:00 pm
ಯಮಗಂಡ : 8:06 am – 9:34 am
ದುರ್ಮುಹುರ್ತ : 12:07 pm – 12:55 pm
ವಿಷ : 8:38 am – 10:07 am
ಗುಳಿಕ : 11:03 am – 12:31 pm

Good Time to be Used
ಅಮೃತಕಾಲ : 5:29 pm – 6:57 pm

Other Data
ಸೂರ್ಯೋದಯ : 6:34 am
ಸುರ್ಯಾಸ್ತಮಯ : 6:28 pm
ರವಿರಾಶಿ : ಕುಂಭ
ಚಂದ್ರರಾಶಿ : ತುಲ

 

 

ಮೇಷ (Mesha)


ಸರಕಾರಿ ಅಧಿಕಾರಿ ವರ್ಗದವರಿಗೆ ವರ್ಗಾವಣೆ ಸಾಧ್ಯತೆ ಇರುತ್ತದೆ. ನಿರುದ್ಯೋಗಿಗಳಿಗೆ ವೃತ್ತಿಯ ಸ್ಥಾನಮಾನ ಶುಭ ತರಲಿದೆ. ಕೌಟುಂಬಿಕ ವಾದ, ವಿವಾದ ಗಳನ್ನು ರಾಜೀ ಮನೋಭಾವದಿಂದ ಪರಿಹರಿಸಿರಿ.

ವೃಷಭ (Vrushabh)


ನಿರುದ್ಯೋಗಿಗಳು ಪ್ರಯತ್ನಪಟ್ಟು ದೃಢ ನಿರ್ಧಾರದಲ್ಲಿ ಮುಂದುವರಿದರೆ ತಾತ್ಕಾಲಿಕ ಉದ್ಯೋಗ ದೊರಕಲಿದೆ. ಅನಾವಶ್ಯಕವಾಗಿ ವಾದ, ವಿವಾದಗಳು ಸಾಂಸಾರಿಕವಾಗಿ ಅಸಮಾಧಾನಕ್ಕೆ ಕಾರಣವಾದಾವು.

ಮಿಥುನ (Mithuna)


ತಾರುಣ್ಯದ ಯುವಕರಿಗೆ ಕನಸಿನ ಕನ್ಯೆ ಬಾಳಸಂಗಾತಿಯಾಗಬಹುದು. ಆರ್ಥಿಕವಾಗಿ ಧನಾತ್ಮಕ ನಿರೂಪಣೆಯು ಕಾರ್ಯಸಾಧನೆಗೆ ಸಾಧಕವಾದೀತು. ಕಾರ್ಯತಂತ್ರಗಳ ಒದ್ದಾಟ ದೇಹಾಯಾಸಕ್ಕೆ ಕಾರಣವಾಗಲಿದೆ.

ಕರ್ಕ (Karka)


ವೃತ್ತಿರಂಗದಲ್ಲಿ ಅಭಿವೃದ್ಧಿಕಾರಕ ಲಕ್ಷಣಗಳು ಅನುಭವಕ್ಕೆ ಬರಲಿವೆೆ. ವ್ಯಾಪಾರಿಗಳ ಮೂಲಧನಕ್ಕೆ ಮೋಸವಾಗದು. ಪ್ರವಾಸಕ್ಕೆ ಪ್ರಯಾಸ ತೋರಿ ಬಂದೀತು. ಸಾಂಸಾರಿಕವಾಗಿ ಮನದನ್ನೆಯ ಮಾತನ್ನು ಮೀರದಿರಿ.

ಸಿಂಹ (Simha)


ಕೌಟುಂಬಿಕ ಬಿರುಕುಗಳು ತೋರಿ ಬಂದಾವು. ಆರೋಗ್ಯ ಭಾಗ್ಯದ ಬಗ್ಗೆ ಉದಾಸೀನತೆ ತೋರದಿರಿ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಏಕಾಗ್ರತೆ ಆಗತ್ಯವಿದೆ. ವೃತ್ತಿಪರವಾಗಿ ಸ್ವಲ್ಪ ಮಟ್ಟಿನ ಬದಲಾವಣೆ ತೋರಿ ಬಂದೀತು.

ಕನ್ಯಾರಾಶಿ (Kanya)


ಆರ್ಥಿಕವಾಗಿ ವಿವಿಧ ರೀತಿಯಲ್ಲಿ ಅಭಿವೃದ್ಧಿ ತೋರಿ ಬಂದರೂ ವಂಚನೆಗೆ ಅವಕಾಶವಿರುತ್ತದೆ. ಹಿತಶತ್ರುಗಳು ನಿಮ್ಮ ಬಗ್ಗೆ ಸಂಶಯ ತಾಳಿಯಾರು. ತಾಳ್ಮೆ ಸಮಾಧಾನ ಚಿತ್ತರಾಗಿ ಮುಂದುವರಿಯಿರಿ.

ತುಲಾ (Tula)


ಸದ್ಯದಲ್ಲೇ ಶುಭಮಂಗಲ ಕಾರ್ಯ ಗಳಿಗಾಗಿ ಸಂಭ್ರಮ ತೋರಿ ಬಂದೀತು. ಉದ್ಯೋಗಸ್ಥ ಮಹಿಳೆ‌ಯರಿಗೆ ಅನಿರೀಕ್ಷಿತವಾಗಿ ಉದ್ಯೋಗದ ಬದಲಾವಣೆ ತಂದೀತು. ಕೋರ್ಟು ಕಚೇರಿ ಕಾರ್ಯದಲ್ಲಿ ಭಾಗಶಃ ನಿಮಗೆ ಯಶಸ್ಸು ಸಿಗಲಿದೆ.

ವೃಶ್ಚಿಕ (Vrushchika)


ವೈಯಕ್ತಿಕವಾಗಿ ವೈದ್ಯರ ಬಳಿ ಸೂಕ್ತ ತಪಾಸಣೆ ಆಗತ್ಯವಿದೆ. ಆಧೈರ್ಯದ ಹೆಜ್ಜೆ ಹಿನ್ನಡೆಗೆ ಕಾರಣವಾದೀತು. ಆಕಸ್ಮಿಕ ಧನಾಭಿವೃದ್ಧಿ ನೂತನ ಕೆಲಸಕಾರ್ಯಗಳಿಗೆ ಅನುಕೂಲವಾಗಲಿದೆ. ವಾಹನದಿಂದ ಲಾಭ.

ಧನು ರಾಶಿ (Dhanu)


ಸ್ತ್ರೀ ಪೀಡೆ, ಅಸ್ತಿ ವಿವಾದದಿಂದ ಕೌಟುಂಬಿಕವಾಗಿ ಮನಸ್ತಾಪ ತೋರಿ ಬರಬಹುದು. ಆರ್ಥಿಕವಾಗಿ ಕೊಟ್ಟ ಸಾಲ ಮರಳಿ ಬರಲಿ. ಅಲೆದಾಟ ಹೆಚ್ಚಿಸಲಿದೆ. ಅವಿವಾಹಿತರಿಗೆ ವಿವಾಹ ಯೋಗ ಇರುತ್ತದೆ.

ಮಕರ (Makara)


ವೈವಾಹಿಕ ಭಾಗ್ಯಕ್ಕೆ ಪೂರಕವಾದ ಪ್ರಚೋದನೆ ಲಭಿಸಬಹುದು. ಕೋರ್ಟು ಕಚೇರಿ ಕಾರ್ಯಭಾಗದಲ್ಲಿ  ಧನವ್ಯಯ ವಾಗಬಹುದು. ರಾಜಕೀಯದವರಿಗೆ ಗೊಂದಲದ ಪರಿಸ್ಥಿತಿ ತಂದೀತು. ದಿನಾಂತ್ಯ ಶುಭ.

ಕುಂಭರಾಶಿ (Kumbha)


ಆರ್ಥಿಕವಾಗಿ ಪರಿಸ್ಥಿತಿ ಹಿನ್ನಡೆಗೆ ಸರಿಯಲಿದೆ. ಆಹಾರ ಸೇವನೆಯಿಂದಲೋ ಎಲರ್ಜಿಯಿಂದಲೋ ಆರೋಗ್ಯ ಹಾನಿಯಾದೀತು. ಯೋಗ್ಯ ವಯಸ್ಕರಿಗೆ ಹೊಸ ವಿವಾಹ ಪ್ರಸ್ತಾವಗಳು ತೋರಿ ಬಂದಾವು.

ಮೀನರಾಶಿ (Meena)


ಸಂತಸದ ದಿನಗಳಿವು. ಮಾತ್ರವಲ್ಲಾ ಕೆಲಸಕಾರ್ಯಗಳಲ್ಲಿ ಸಫ‌ಲತೆ ತೋರಿ ಬರಲಿದೆ. ಸಾಮಾಜಿಕವಾಗಿ ಇತರರ ಮೆಚ್ಚುಗೆಯನ್ನು ಗಳಿಸಲಿದ್ದೀರಿ. ಚಿಂತಿತ ಕೆಲಸಗಳು ಒಂದೊಂ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top