fbpx
ಸಮಾಚಾರ

ಶೂಟಿಂಗ್​ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಬ್ ಶೆಟ್ಟಿಗೆ ಬೆನ್ನು, ತಲೆಗೆ ಬೆಂಕಿ: ವಿಡಿಯೋ

ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಹು ನಿರೀಕ್ಷಿತ ಚಿತ್ರ ‘ಹೀರೋ’ ಇದೇ ಮಾರ್ಚ್‌ 5ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಚಿತ್ರೀಕರಣದ ವೇಳೆ ನಡೆದ ಅವಗಢದ ಬಗ್ಗೆ ಈಗ ಮಾಹಿತಿಯೊಂದು ಬಹಿರಂಗಗೊಂಡಿದೆ. ಚಿತ್ರೀಕರಣದ ವೇಳೆ ನಟ ರಿಷಬ್ ಶೆಟ್ಟಿಗೆ ಬೆಂಕಿ ತಗುಲಿರುವ ಘಟನೆ ಈಗ ಬಹಿರಂಗಗೊಂಡಿದೆ.

 

 

ರಿಷಬ್ ಶೆಟ್ಟಿ ಹಾಗೂ ನಟಿ ಗಾನವಿ ಸಾಹಸ ದೃಶ್ಯ ಚಿತ್ರೀಕರಣವೊಂದಕ್ಕೆ ಪೆಟ್ರೋಲ್ ಬಾಂಬ್ ಬಳಸಲಾಗಿತ್ತು. ಮೊದಲ ಬಾಂಬ್ ಸಿಡಿದರೂ ಯಾವ ಸಮಸ್ಯೆಯಬ ಇರಲಿಲ್ಲ. ಆದರೆ, ಎರಡನೇ ಬಾಂಬ್ ಸ್ಪೋಟಗೊಂಡಾಗ ರಿಷಬ್‌ ಕೊಂಚ ಯಾಮಾರಿದ್ರೆ ಪ್ರಾಣಕ್ಕಿತ್ತು, ದೊಡ್ಡ ಅಪಾಯ. ಇದರಿಂದ ರಿಷಬ್‌ ಕೂದಲು ಸುಟ್ಟಿದೆ ಹಾಗೂ ಬೆನ್ನ ಮೇಲೆ ಗಾಯವಾಗಿದೆ. ಸಾಕಷ್ಟು ಮುಂಜಾಗ್ರತ ಕ್ರಮ ತೆಗದುಕೊಂಡಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಲಿಲ್ಲ

ಘಟನೆ ಕುರಿತು ಮಾತನಾಡಿರುವ ರಿಷಬ್‌, ‌‘ಕಳೆದ ವರ್ಷ ಜುಲೈ ತಿಂಗಳ ಕೊನೆಯಲ್ಲಿ ಈ ಘಟನೆ ನಡೆದಿದೆ. ದೊಡ್ಡ ಅನಾಹುತ ಆಗಿಲ್ಲ. ಸ್ಫೋಟದಿಂದಾಗಿ ಬೆನ್ನಿಗೆ ಬೆಂಕಿ ಹತ್ತಿತ್ತು. ಕೂದಲೂ ಸುಟ್ಟು ಹೋಗಿತ್ತು. ಚಿತ್ರೀಕರಣದ ಸಂದರ್ಭದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಂಡಿದ್ದ ಕಾರಣ ಹೆಚ್ಚಿನ ಅನಾಹುತವೇನೂ ಆಗಿಲ್ಲ. ಬೆನ್ನ ಹಿಂದೆ ಸ್ಫೋಟವಾಗುವ ಕಾರಣ, ಅನಾಹುತವೇನಾದ್ರೂ ಆದರೆ ನಾಯಕಿ ಗಾನವಿಗೆ ತೊಂದರೆಯಾಗಬಾರದು ಎಂದು ಅವರನ್ನು ನನ್ನ ಮುಂದೆ ನಿಲ್ಲಿಸಿದ್ದೆ. ಜೊತೆಗೆ ಚಿತ್ರೀಕರಣದ ಜಾಗದಲ್ಲಿ ನೀರು ಕೆಸರು ಇದ್ದ ಕಾರಣ ಅದನ್ನು ಬೇಗ ನಂದಿಸಿಕೊಳ್ಳಲು ಸಾಧ್ಯವಾಯಿತು’ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top