fbpx
ಸಮಾಚಾರ

ವಿಶ್ವ ವನ್ಯಜೀವಿ ದಿನದ ಅಂಗವಾಗಿ ವಿಶೇಷ ಮನವಿ ಮಾಡಿದ ನಟ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಮೊದಲಿನಿಂದಲೂ ಪ್ರಾಣಿಗಳ ಮೇಲೆ ಒಲವಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರ ಪ್ರಾಣಿ ಪ್ರೀತಿಯ ಬಗ್ಗೆ ಬಿಡಿಸಿ ಹೇಳೋ ಅಗತ್ಯವೇನಿಲ್ಲ. ಅವರ ಫಾರ್ಮ್ ಹೌಸ್, ಅಲ್ಲಿರೋ ಹಸು, ಕುದುರೆಗಳ ಕಥೆಯೆಲ್ಲ ಅಭಿಮಾನಿಗಳ ಪಾಲಿಗೆ ಹೊಸತೇನಲ್ಲ. ದರ್ಶನ್ ಮೈಸೂರು ಮೃಗಾಲಯದಲ್ಲಿನ ಕೆಲ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಲಹುತ್ತಿರೋದೂ ಕೂಡಾ ತಿಳಿದದ್ದೇ. ಇನ್ನು ಬೆಂಗಳೂರಿನ ದರ್ಶನ್ ಅವರ ಮನೆ ಮುಂದೆ ತರಹೇವಾರಿ ಪ್ರಬೇಧದ ನಾಯಿಗಳು ಕಾವಲಿಗಿರುತ್ತವೆ.

 

 

ಇಂದು ವಿಶ್ವ ವನ್ಯಜೀವಿಗಳ ದಿನವಾಗಿದ್ದು, ಟ್ವಿಟರ್​ನಲ್ಲಿ ತಾವೇ ಕ್ಲಿಕ್ಕಿಸಿರುವ ವನ್ಯಜೀವಿಗಳ ಫೋಟೋಗಳನ್ನ ಅಪ್ಲೋಡ್​ ಮಾಡಿ, ಮತ್ತೆ ವನ್ಯಜೀವಿಗಳ ಪರಿ ತಮ್ಮ ಪ್ರೀತಿಯನ್ನ ತೋರಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಎಲ್ಲರೂ ಈ ಪ್ರೀತಿಯನ್ನ ಬೆಳೆಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ.

‘ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ. ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ, ನಿಮಗೆ ಕಾಳಜಿಯನ್ನು ತೋರಿಸುತ್ತದೆ, ಅಪರಿಚಿತರಾಗಬೇಡಿ! ಪ್ರಾಣಿಗಳನ್ನು ಉಳಿಸಿ ಏಕೆಂದರೆ ಅವು ಈ ಪ್ರಪಂಚದ ಒಂದು ಭಾಗವಾಗಿದೆ! ವನ್ಯಜೀವಿಗಳಿಗಾಗಿ ನಿಲ್ಲುವ ಸಮಯ.’ ಎಂದು ಒಕ್ಕಣೆ ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top